ಚಾಮರಾಜನಗರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದ 12 ಮಂದಿ ಅಭ್ಯರ್ಥಿಗಳಲ್ಲಿ ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 10 ಮಂದಿ ಕಣದಲ್ಲಿದ್ದಾರೆ.
ಚಾಮರಾಜನಗರ ಕ್ಷೇತ್ರದಿಂದ 10 ಮಂದಿ ಕಣಕ್ಕೆ: ಕೈ-ಕಮಲ, ಆನೆ ನಡುವೆ ನೇರ ಫೈಟ್!
ಚಾಮರಾಜನಗರ ಲೋಕಸಭಾ ಚುನಾವಣೆ ಕಣ ರಂಗೇರಿದೆ. ಇಷ್ಟು ದಿನ ಕಾಂಗ್ರೆಸ್-ಬಿಜೆಪಿ ನಡುವೆ ಇದ್ದ ನೇರಾ ಹಣಾಹಣಿಯಲ್ಲಿ ಇದೀಗ ಬಿಎಸ್ಪಿಯಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ. ಹೊನ್ನೂರಯ್ಯ ಮತ್ತು ಎಸ್.ಎಂ. ಲಿಂಗಯ್ಯ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್ನಿಂದ ಆರ್.ಧ್ರುವನಾರಾಯಣ, ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್, ಬಿಎಸ್ಪಿಯಿಂದ ಡಾ.ಶಿವಕುಮಾರ್, ಯುಪಿಪಿಯಿಂದ ಹನೂರು ನಾಗರಾಜು, ಕರ್ನಾಟಕ ಪ್ರಜಾ ಪಾರ್ಟಿಯಿಂದ ಪ್ರಸನ್ನಕುಮಾರ್ ಬಿ, ಇಂಡಿಯನ್ ನ್ಯೂ ಕಾಂಗ್ರೆಸ್ನಿಂದ ಸುಬ್ಬಯ್ಯ ಮತ್ತು ಪಕ್ಷೇತರರಾಗಿ ಆನಂದ ಜೀವನ್ ರಾಂ, ಎನ್. ಅಂಬರೀಷ್,ಎಂ. ಪ್ರದೀಪ್‍ಕುಮಾರ್,ಜಿ.ಡಿ. ರಾಜಗೋಪಾಲ್ ಕಣದಲ್ಲಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದ ನೇರಾ ಹಣಾಹಣಿಯಲ್ಲಿ ಬಿಎಸ್ಪಿಯಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.