ಕರ್ನಾಟಕ

karnataka

ETV Bharat / state

ನಾನೇ ಘಟಾನುಘಟಿ, ನನಗಿಂತ ಬಲಿಷ್ಠರು ಯಾರೂ ಇಲ್ಲ: ವಾಟಾಳ್ ನಾಗರಾಜ್​

ನನ್ನನ್ನು ಗೆಲ್ಲಿಸಬೇಕು ಎಂಬುದು ಜನರ ತಲೆಯಲ್ಲಿ ಬಂದು ಬಿಟ್ಟಿದೆ. ಸಂಸದರಾಗಿ ಆಯ್ಕೆಯಾದವರು ಯಾರೂ ಕನ್ನಡಕ್ಕಾಗಿ ಕೆಲಸ, ಹೋರಾಟವನ್ನು ಮಾಡಿಲ್ಲ. ಇದು ಬೆಂಗಳೂರಿನ ಸಮಗ್ರ ಕನ್ನಡಿಗರಿಗೆ ಗೊತ್ತಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಕುರಿತು ವಾಟಾಳ್ ನಾಗರಾಜ್​ ಪ್ರತಿಕ್ರಿಯೆ

By

Published : Apr 3, 2019, 7:20 PM IST

ಬೆಂಗಳೂರು: ಇಡೀ ರಾಜ್ಯದಲ್ಲಿ ನಾನೇ ಘಟಾನುಘಟಿ. ನನಗಿಂತ ಘಟಾನುಘಟಿಗಳು ಯಾರೂ ಇಲ್ಲ ಎಂದು ವಾಟಾಳ್ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅವರು ಈ ಟಿವಿ ಭಾರತದ ಜತೆ ಮಾತನಾಡಿ, ವೈಯಕ್ತಿಕವಾಗಿ ಹೇಳುವುದಾದರೆ ಇಡೀ ರಾಜ್ಯದಲ್ಲಿಯೇ ನಾನು ಘಟಾನುಘಟಿ. ರಾಜ್ಯದ ಎಲ್ಲಾ ರಾಜಕಾರಣಿಗಳಿಗೂ ಒಂದು ಕೈ ಮೇಲು ನಾನಿದ್ದೇನೆ ಎಂದರು.

ರಾಜ್ಯಾದ್ಯಂತ ಸಾಕಷ್ಟು ಸಮಸ್ಯೆ ಇದೆ. ಇದಕ್ಕಾಗಿಯೇ ನಾವು ಹಲವು ಹೋರಾಟಗಳನ್ನು ಮಾಡಿದ್ದೇವೆ. ಮೇಕೆದಾಟು ಚಳವಳಿ ಕೂಡ ಮಾಡಿದ್ದೇನೆ, ಕಾವೇರಿ ಹೋರಾಟ ಮಾಡಿದ್ದೇನೆ, ಬೆಂಗಳೂರಿನ ಜನತೆಗೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕೆ ಹೋರಾಡಿದ್ದೇನೆ. ಬೆಂಗಳೂರಿನಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ. ಈ ಭದ್ರತೆ ಒದಗಿಸುವ ಕಾರ್ಯ ಆಗಬೇಕಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕು. ನಗರದ ರಸ್ತೆಗಳು ಇನ್ನಷ್ಟು ಅಭಿವೃದ್ಧಿ ಆಗಬೇಕು. ಬೆಂಗಳೂರು ನಗರ ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡೀಕರಣ ಆಗಬೇಕು ಎಂದರು.

ನನ್ನನ್ನು ಗೆಲ್ಲಿಸಬೇಕು ಎಂಬುದು ಜನರ ತಲೆಯಲ್ಲಿ ಬಂದು ಬಿಟ್ಟಿದೆ. ಸಂಸದರಾಗಿ ಆಯ್ಕೆಯಾಗಿ ಯಾರೂ ಕನ್ನಡಕ್ಕಾಗಿ ಕೆಲಸ, ಹೋರಾಟವನ್ನು ಮಾಡಿಲ್ಲ. ಇದು ಬೆಂಗಳೂರಿನ ಸಮಗ್ರ ಕನ್ನಡಿಗರಿಗೆ ಗೊತ್ತಾಗಿದೆ. ಆ ದೃಷ್ಟಿಯಿಂದ ವಾಟಾಳ್ ನಾಗರಾಜ್ ಅವರನ್ನು ಇಲ್ಲಿಗೆ ಕಳುಹಿಸಿಕೊಡಬೇಕು ಎಂದು ಹೇಳಿ ನಿರ್ಧರಿಸಿದ್ದಾರೆ. ನಾನು ಈ ಜನರ ಪ್ರೀತಿ ವಿಶ್ವಾಸದಿಂದ ಗೆದ್ದೇ ಗೆಲ್ಲುತ್ತೇನೆ ಎಂದರು.

ಲೋಕಸಭಾ ಚುನಾವಣೆ ಕುರಿತು ವಾಟಾಳ್ ನಾಗರಾಜ್​ ಪ್ರತಿಕ್ರಿಯೆ

ಸತ್ಯ ಹೇಳ್​ಬೇಕು ಅಂದ್ರೇ, ಮೊದಲು ನಾನು ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ. ಅನಂತ್ ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡದ ಕಾರಣ ನಾನು ನಿಲ್ಲಬೇಕೇಂದು ತೀರ್ಮಾನಿಸಿದೆ. ಅನಂತ್ ಕುಮಾರ್​ಗಿಂತಲೂ ಮೊದಲಿಂದಲೂ ನನಗೆ ಈ ಕ್ಷೇತ್ರದ ಪರಿಚಯವಿದೆ. ವಿಜಯನಗರ ಹಾಗೂ ಗೋವಿಂದರಾಜ ನಗರ ಪ್ರದೇಶದಲ್ಲಿ ನಾನು ಈ ಹಿಂದೆ ಎರಡು ಸಾರಿ ವಿಧಾನಸಭೆಗೆ ನಿಂತು, ಗೆದ್ದು ಶಾಸಕನಾಗಿದ್ದೆ. ಇದು ನನ್ನ ಅಸೆಂಬ್ಲಿ ಕ್ಷೇತ್ರ. ಇಲ್ಲಿನ ಬಹುತೇಕ ಜನ ನನ್ನ ಅಭಿಮಾನಿಗಳು ಜೊತೆಗೆ ಬೆಂಗಳೂರಿನ ಯಾವುದೇ ಕ್ಷೇತ್ರದಲ್ಲಿ ನಿಂತರೆ ಅಲ್ಲಿ ನನಗೆ ಅಭಿಮಾನಿಗಳು ಇದ್ದಾರೆ. ನಿರಂತರ ಐವತ್ತು ವರ್ಷಗಳ ಕಾಲ ಕನ್ನಡದ ಅಭಿವೃದ್ಧಿ ಬಗ್ಗೆ, ಕನ್ನಡಿಗರ ಏಳಿಗೆ ಬಗ್ಗೆ ಶ್ರಮಿಸಿದ್ದೇನೆ, ಹೋರಾಟ ನಡೆಸಿದ್ದೇನೆ. ಆ ಒಂದು ಪ್ರೀತಿ ಅಭಿಮಾನದ ಮೇಲೆ ಜನ ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.


For All Latest Updates

ABOUT THE AUTHOR

...view details