ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ:ಫಲಿತಾಂಶ ಪಡೆಯಲು ಮಾಧ್ಯಮ ಕೇಂದ್ರ ಸ್ಥಾಪನೆ - undefined

ನಾಳೆ ಲೋಕಸಭಾ ಚುನಾವಣಾ ಫಲಿತಾಂಶದ ಬಗೆಗಿನ ಕುತೂಹಲಕ್ಕೆ ತೆರೆಬೀಳಲಿದೆ. ಬೆಳಿಗೆ 7 ಗಂಟೆಯಿಂದ ಮತಎಣಿಕೆಯ ಎಲ್ಲಾ ಚಟುವಟಿಕೆಗಳು ಪ್ರಾರಂಭವಾಗಲಿದೆ. ನಾಳೆಯ ಫಲಿತಾಂಶದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆಯಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಲಾಗಿದೆ.

ಮಾಧ್ಯಮ ಕೇಂದ್ರ ಸ್ಥಾಪನೆ

By

Published : May 22, 2019, 8:50 PM IST

ಬೆಂಗಳೂರು:ಭಾರಿ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ‌ ಇಲಾಖೆಯಲ್ಲಿ ಮಾಧ್ಯಮ ಕೇಂದ್ರವನ್ನ ಉದ್ಘಾಟಿಸಲಾಯಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾಧ್ಯಮ ಕೇಂದ್ರವನ್ನ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತಾನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶವನ್ನು ನೀಡಲು ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿ ‌30 ಗಣಕಯಂತ್ರ ಸೇರಿದಂತೆ ಎಲ್​ಇಡಿ ಸ್ಕ್ರೀನ್​ಗಳನ್ನು ಹಾಕಲಾಗಿದೆ. ಪ್ರತಿ ಜಿಲ್ಲೆಗಳಿಂದಲೂ ಇಲ್ಲಿಯೇ ನೇರವಾಗಿ ಮಾಹಿತಿ ದೊರೆಯುತ್ತದೆ. ಮಾಧ್ಯಮ ಹಾಗೂ ಗಣ್ಯ ವ್ಯಕ್ತಿಗಳು ಚುನಾವಣಾ ಫಲಿತಾಂಶದ ಮಾಹಿತಿಯನ್ನು ಇಲ್ಲಿ ಪಡೆಯಬಹುದು ಎಂದು ತಿಳಿಸಿದರು.

ಮಾಧ್ಯಮ ಕೇಂದ್ರವನ್ನ ಉದ್ಘಾಟಿಸಿದ ಟಿ. ಎಂ. ವಿಜಯ್ ಭಾಸ್ಕರ್

ಬೆಳಿಗೆ 7 ರಿಂದ ಎಲ್ಲಾ ಚಟುವಟಿಕೆಗಳು ಪ್ರಾರಂಭವಾಗಲಿದ್ದು, ನಾಳೆಯ ಫಲಿತಾಂಶದ ಬಗ್ಗೆ ಮಾಧ್ಯಮ ಕೇಂದ್ರದಲ್ಲಿ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತದೆ.

For All Latest Updates

TAGGED:

ABOUT THE AUTHOR

...view details