ಕರ್ನಾಟಕ

karnataka

ETV Bharat / state

ಅತೃಪ್ತ ಶಾಸಕರ ರಾಜೀನಾಮೆ ವಿಚಾರ: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ, 10:30ಕ್ಕೆ ಆದೇಶ

superem

By

Published : Jul 16, 2019, 3:24 PM IST

Updated : Jul 16, 2019, 3:56 PM IST

15:24 July 16

ಅತೃಪ್ತ ಶಾಸಕರ ರಾಜೀನಾಮೆ ವಿಚಾರ: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ

ವಾದ - ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್​ ಪ್ರಕರಣದ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. 

ಬೆಳಗ್ಗೆ 10.30ಕ್ಕೆ ಆದೇಶ ಪ್ರಕಟಿಸಲಿದೆ. 

15:22 July 16

ಅತೃಪ್ತರ ರಾಜೀನಾಮೆ: ನಾಳೆಯೊಳಗೆ ಸ್ಪೀಕರ್​ ತೀರ್ಮಾನ, ಸುಪ್ರೀಂಗೆ ಸಿಂಗ್ವಿ ವಾದ

ಬೆಂಗಳೂರು: ಕೆಲವು ಶಾಸಕರು ರಾಜೀನಾಮೆ ನೀಡುವ ಮುನ್ನವೇ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿವೆ. ತ್ವರಿತವಾಗಿ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಸರಿಯಾದ ಕ್ರಮವಲ್ಲ. ವಿಚಾರಣಾ ಪ್ರಕ್ರಿಯೆಗಳನ್ನು ಮಧ್ಯರಾತ್ರಿಯಲ್ಲೇ ಮುಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಅತೃಪ್ತ ಶಾಸಕರ ರಾಜೀನಾಮೆ ಏಕೆ ಅಂಗೀಕರಿಸುತ್ತಿಲ್ಲ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಘ್ವಿ, 190ರ ಪ್ರಕಾರ ವಿಚಾರಣೆ ನಡೆಯುತ್ತಿದೆ. ರಾಜೀನಾಮೆ ಅಂಗೀಕಾರಕ್ಕೆ ಆತುರವಿಲ್ಲ ಎಂದರು. 

ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ಸ್ಪೀಕರ್ ಆರಂಭಿಸಿದ್ದಾರೆ. ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರು ನ್ಯಾಯಾಲಯ ಮತ್ತು ವಿಚಾರಣೆಯ ಹಾದಿ ತಪ್ಪಿಸುತ್ತಿದ್ದಾರೆ. ತ್ವರಿತ ಅಂಗೀಕಾರ ಕ್ರಮವಲ್ಲ. ಕ್ರಮಬದ್ಧತೆ ಅನುಸರಿಸುವುದು ನಿಯಮ. ಅದನ್ನೇ ಸ್ಪೀಕರ್ ರಮೇಶ್ ಕುಮಾರ್ ಮಾಡುತ್ತಿದ್ದಾರೆ. ರಾಜೀನಾಮೆಯ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕವೂ ಸ್ಪೀಕರ್ ಏಕೆ ಕ್ರಮ ಜರುಗಿಸಿಲ್ಲ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ, ಮನುಸಿಂಘ್ವಿ, ತಮ್ಮ ಇಷ್ಟದ ಪ್ರಕಾರ ತೀರ್ಮಾನ ಅನ್ನುವುದು ಸರಿಯಲ್ಲ. ಶಾಸಕರು ಸ್ಪೀಕರ್ ಬಳಿ ಸಮಯವನ್ನೇ ಕೇಳಿರಲಿಲ್ಲ. ಹಾಗಾಗಿ ಅನರ್ಹತೆ ಅರ್ಜಿ ಮೊದಲು ಪರಿಗಣನೆಯಾಗಲಿ ಎಂದಿದ್ದಾರೆ. 

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ಅವರನ್ನು ತಡೆಯುತ್ತಿರುವುದು ಯಾರು. ಸರಕಾರ ಏನಾದ್ರೂ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದೆಯೇ ಎಂದು ಸಿಜೆಐ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿಂಘ್ವಿ, ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ. 24 ಗಂಟೆಯೊಳಗೆ ರಾಜೀನಾಮೆ ಅಂಗೀಕರಿಸಿ ಅನರ್ಹತೆ ಬಗ್ಗೆ ಯಾಕೆ ತೀರ್ಮಾನಿಸಿಲ್ಲ ಎಂದು ಕೋರ್ಟ್ ಮರು ಪ್ರಶ್ನೆ ಹಾಕಿದೆ. ನಾಳೆ ಒಳಗೆ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಲಿದ್ದಾರೆ ಎಂದು ಸಿಂಘ್ವಿ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ. 

15:20 July 16

ಕಟಕಟೆಯಲ್ಲಿ ಕರ್ನಾಟಕ ರಾಜಕೀಯ

ಬೆಂಗಳೂರು:ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರ ಪರ ವಾದ ಮಂಡಿಸಿದ ವಕೀಲ ರಾಜೀವ್​ ಧವನ್​ ಅವರು ಬಂಡಾಯ ಶಾಸಕರು ಸ್ಪೀಕರ್​ ಭೇಟಿಯಾಗಬೇಕಾದ ಸಮಯದಲ್ಲಿ ಮುಂಬೈಗೆ ಹೋದರು ಎಂದು ಆರೋಪಿಸಿದರು. 

ರಾಜೀನಾಮೆಗೆ ಕಾರಣ ಮುಖ್ಯವಾಗುತ್ತದೆ. ಹನ್ನೊಂದು ಮಂದಿ ಶಾಸಕರು ರಾಜೀನಾಮೆ ಕೊಟ್ಟು ಮುಂಬೈ ಕಡೆಗೆ ಹೋದರು, ಅದಕ್ಕೆ ಕಾರಣಗಳನ್ನು ಸ್ಪೀಕರ್​ ಮುಂದೆ ಹೇಳಿಕೊಳ್ಳಲಿಲ್ಲ ಎಂದು ವಾದ ಮಂಡಿಸಿದರು. 

ಈ ಪ್ರಕರಣದಲ್ಲಿ ಸ್ಪೀಕರ್​ ಅವರು ಪ್ರಜ್ಞಾಪೂರ್ವಕವಾಗಿ ನಡೆದುಕೊಂಡಿದ್ದಾರೆ. ಬಂಡಾಯ ಶಾಸಕರು ಅವರ ಮೇಲೆ ಹೊರಿಸಿರುವ ಆರೋಪಗಳು ಸತ್ಯಕ್ಕೆ ದೂರವಾದ ಮಾತು. ಈ ಕೂಡಲೇ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಅವರು ವಾದಿಸಿದರು. ಸ್ಪೀಕರ್​ ಅವರು ಜುಲೈ.6ರಿಂದ ಏನು ಮಾಡುತ್ತಿದ್ದಾರೆ ಎಂದು ನೀವು (ನ್ಯಾಯಮೂರ್ತಿಗಳು) ಕೇಳಿದ್ದಿರಿ. ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳನ್ನು ಅವರು ಪರಿಶೀಲಿಸುತ್ತಿದ್ದಾರೆ. ಅದು ತ್ವರಿತವಾಗಿ ಆಗುವಂತದ್ದಲ್ಲ ಎಂದು ವಾದಿಸಿದರು.

ಭೋಜನ ವಿರಾಮದ ನಂತರ ವಾದ ಮುಂದುವರಿಸಿದ ಸ್ಪೀಕರ್​ ಪರ ವಕೀಲ ಅಭಿಷೇಕ್​ ಮನು ಸಿಂಗ್ವಿ ಅವರು ಪರಿಚ್ಛೇದ 32ರ ಅಡಿಯಲ್ಲಿ ಸ್ಪೀಕರ್​ಗಿರುವ ಸಾಂವಿಧಾನಿಕ ಅಧಿಕಾರವನ್ನು ಸುಪ್ರೀಂ ಕೋರ್ಟ್​ ಪ್ರಶ್ನಿಸುವಂತಿಲ್ಲ. ರಾಜೀನಾಮೆ ಅರ್ಜಿ ಪರಿಶೀಲಿಸಲು ಕಾಲಮಿತಿ ನೀಡಬಹುದೇ ಹೊರತು, ಸ್ಪೀಕರ್​ಗೆ ನಿರ್ದೇಶನ ನೀಡುವಂತಿಲ್ಲ ಎಂದು ಹೇಳಿದರು.  

ಸಚಿವರಾಗಬೇಕೆಂದು ನಾನು ಹೇಳಿಲ್ಲ: ಸಚಿವ ಸ್ಥಾನದ ಆಸೆಯಿಂದಾಗಿ ಶಾಸಕರು ರಾಜೀನಾಮೆ ನಿಡಿದ್ದಾರೆ ಎಂದು ರೋಹ್ಟಗಿ ಅವರೇ ವಾದ ಮಂಡಿಸಿದ್ದಾರೆ ಎಂದು ಸಿಂಗ್ವಿ ಹೇಳಿದಾಗ ಮಧ್ಯ ಪ್ರವೇಶಿಸಿದ ರೋಹ್ಟಗಿ ಅವರು ನಾನು ಆರೀತಿ ಹೇಳಿಲ್ಲ ಎಂದರು. ನ್ಯಾಯ ಮೂರ್ತಿಗಳು ಮಧ್ಯ ಪ್ರವೇಶಿಸಿ ನಿಮ್ಮ ವಾದ ನಡೆಯುವಾಗ ಆ ರೀತಿ ಹೇಳಿದ್ದಿರಿ ಎಂದು ನೆನಪಿಸಿದರು. 

Last Updated : Jul 16, 2019, 3:56 PM IST

For All Latest Updates

TAGGED:

ABOUT THE AUTHOR

...view details