ಕರ್ನಾಟಕ

karnataka

ETV Bharat / state

ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 6 ಕ್ಕೆ ಏರಿಕೆ, ಸ್ಥಳಕ್ಕೆ ಎಂ ಎನ್ ರೆಡ್ಡಿ ಭೇಟಿ

ಕಟ್ಟಡ ಕುಸಿತದಿಂದ ಮೃತರ ಸಂಖ್ಯೆ 6 ಕ್ಕೆ ಏರಿದೆ. ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನ ಮೃತದೇಹ ಅವಶೇಷಗಳಡಿ ಪತ್ತೆಯಾಗಿದೆ.

ಕಟ್ಟಡ ಕುಸಿತ ಸ್ಥಳಕ್ಕೆ ಡಿಜಿ ಎಂ ಎನ್ ರೆಡ್ಡಿ ಭೇಟಿ

By

Published : Jul 10, 2019, 1:05 PM IST

ಬೆಂಗಳೂರು: ಕಟ್ಟಡ ಕುಸಿತ ಪ್ರಕರಣ ಸಂಬಂಧ ಮೃತರ ಸಂಖ್ಯೆ 6 ಕ್ಕೆ ಏರಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಡಿ ಜಿ ಎಂ.ಎನ್. ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಖಗನ್ ಸರ್ಕಾರ್​ (48) ಮೃತ ದುರ್ದೈವಿ. ಖಗನ್ ಸರ್ಕಾರ್​ ಮೃತದೇಹ ಅವಶೇಷಗಳಡಿ ಪತ್ತೆ ಆಗಿದ್ದು, ಇನ್ನೊಬ್ಬರ ಮೃತ ದೇಹ ಪಿಲ್ಲರ್​ನಲ್ಲಿ ಸಿಲುಕಿರುವುದಾಗಿ ಎನ್​​ಡಿ‌ಆರ್​ಎಫ್ ತಂಡ ತಿಳಿಸಿದೆ.

ಕಟ್ಟಡ ಕುಸಿತ ಸ್ಥಳಕ್ಕೆ ಡಿಜಿ ಎಂ ಎನ್ ರೆಡ್ಡಿ ಭೇಟಿ

ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಡಿಜಿ, ಎಂ ಎನ್ ರೆಡ್ಡಿ ಅವರು, ಕಟ್ಟಡ ಕುಸಿತದ ಸ್ಥಳ ಪರಿಶೀಲಿಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಇವರಿಗೆ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಮುರುಗನ್ ಸಾಥ್ ನೀಡಿದ್ರು.

ಪರಿಶೀಲನೆ ನಂತರ ಮಾತಾನಾಡಿದ ಮುರುಗನ್, ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details