ಬೀದರ್ :ಕೊರೊನಾ ಸೋಂಕು ತಡೆಯಲು ಲಾಕ್‌ಡೌನ್ ಹೇರುವುದಾದರೆ ರಾಜ್ಯದ ಒಂದು ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ರೂ. ಅವರುಗಳ ಅಕೌಂಟ್ಗೆ ಜಮಾ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಮಾಡುವುದರಿಂದ ಪರಿಹಾರ ಇಲ್ಲ. ಮೊದಲು ಈ ರೋಗ ಹೇಗೆ ಹರಡುತ್ತಿದೆ ಎಂಬುದನ್ನು ಕಂಡು ಹಿಡಿದು ಚಿಕಿತ್ಸೆ ನೀಡಬೇಕು ಎಂದರು.
ಸರ್ಕಾರಕ್ಕೆ ಸಲಹೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ.. ಇದನ್ನೂ ಓದಿ:ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಒಂದು ವಾರದಲ್ಲಿ ಬೇರೆ ಕ್ರಮಗಳ ಬಗ್ಗೆ ನಿರ್ಧಾರ : ಸಿಎಂ
ಕೊರೊನಾ ಸೋಂಕು ಕಡಿಮೆ ಆದಾಗ ಸರ್ಕಾರ ರಿಲ್ಯಾಕ್ಸ್ ಮಾಡಿದೆ. ಟೆಸ್ಟ್ ಮಾಡುವುದನ್ನೇ ಬಿಟ್ಟು ಬಿಟ್ಟಿದೆ. ಹೊರಗಡೆಯಿಂದ ಬರುವವರನ್ನು ಪರಿಶೀಲಿಸುವುದನ್ನು ಬಿಟ್ಟರು. ಸಭೆ-ಸಮಾರಂಭಗಳನ್ನು ಮಾಡಲುಕೆ ಶುರು ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.
ಕಡ್ಡಾಯವಾಗಿ ಎಲ್ಲರಿಗೂ ಕೊರೊನಾ ಲಸಿಕೆ ಹಾಕಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ವ ಪಕ್ಷಗಳ ಸಭೆ ಕರೆದರೆ ಹೋಗುತ್ತೇವೆ. ಕರೆಯದೆ ಹೊಗಲಿಕ್ಕಾಗುತ್ತಾ ಎಂದು ಪ್ರಶ್ನಿಸಿದರು.