ಕರ್ನಾಟಕ

karnataka

ETV Bharat / state

ಪೌರತ್ವ ಬಗ್ಗೆ ನಮ್ಮ ದೇಶದ ಮುಸ್ಲಿಂ ಬಂಧುಗಳು ಹೆದರುವ ಅಗತ್ಯವಿಲ್ಲ: ಭಗವಂತ ಖೂಬಾ

ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಹೆದರಿಕೆ ಇದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರಿಗೆ ಇರಬೇಕು. ನಮ್ಮ ದೇಶದ ಮುಸ್ಲಿಂ ಬಂಧುಗಳು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂದು ಸಂಸದ ಭಗವಂತ್‌ ಖೂಬಾ ಅಭಯ ನೀಡಿದರು.

basavakalyana
ಸಂಸದ ಭಗವಂತ್‌ ಖೂಬಾ

By

Published : Dec 28, 2019, 11:17 AM IST

ಬಸವಕಲ್ಯಾಣ:ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಹೆದರಿಕೆ ಇದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರಿಗೆ ಇರಬೇಕು. ನಮ್ಮ ದೇಶದ ಮುಸ್ಲಿಂ ಬಂಧುಗಳು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂದು ಸಂಸದ ಭಗವಂತ್‌ ಖೂಬಾ ಅಭಯ ನೀಡಿದರು.

ಝಿಕ್ರಾ ಕನ್ಯಾ ಉರ್ದು ಪೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ

ನಗರದ ಝಿಕ್ರಾ ಕನ್ಯಾ ಉರ್ದು ಪೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೌರತ್ವ ಕಾಯಿದೆ ಕುರಿತು ದೇಶದಲ್ಲಿ ಸುಳ್ಳು ವರದಿ ಹಬ್ಬಿಸಲಾಗುತ್ತಿದೆ. ಭಾರತದ ಅಲ್ಪಸಂಖ್ಯಾತ ಬಂಧುಗಳು ಸುಳ್ಳು ಪ್ರಚಾರಕ್ಕೆ ಹೆದರುವ ಅಗತ್ಯವಿಲ್ಲ. ಭಾರತ ಸರ್ಕಾರ ನಿಮ್ಮೊಂದಿಗಿದೆ. ನೂತನ ಕಾಯಿದೆ ಬಗ್ಗೆ ನಿಮ್ಮಲ್ಲಿ ಯಾವುದೇ ಸಂಶಯವಿದ್ದರೆ ನೇರವಾಗಿ ತಮ್ಮನ್ನು ಸಂಪರ್ಕಿಸಿ, ಸಂಶಯ ದೂರಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪೌರತ್ವದ ಬಗ್ಗೆ ಜನರಿಗೆ ತಪ್ಪು ತಿಳುವಳಿಕೆ ನೀಡಿ ಅವರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದರಿಂದ ಕೋಮು ಗಲಭೆಗಳು ನಡೆಯುತ್ತಿವೆ. ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು. ಭಾರತದಲ್ಲಿ ಜನಿಸಿದ ನಾವೆಲ್ಲರೂ ಸಹೋದರರು ಎನ್ನುವ ಭಾವನೆ ಅಳವಡಿಸಿಕೊಂಡು, ಏಕತೆ ಪ್ರದರ್ಶಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ನಾರಾಯಣರಾವ್​, ಮಾಜಿ ಶಾಸಕ ಮಾರುತಿರಾವ್ ಮುಳೆ, ಸಂಸ್ಥೆ ಅಧ್ಯಕ್ಷ ಡಾ.ಎಂ.ಎ. ಕರೀಮ್​, ಪ್ರಧಾನ ಕಾರ್ಯದರ್ಶಿ ಮುಜಾಹಿದ್​ ಪಾಶಾ ಖರೇಶಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ABOUT THE AUTHOR

...view details