ಕರ್ನಾಟಕ

karnataka

ETV Bharat / state

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹೆದ್ದಾರಿ ತಡೆದು ಪ್ರತಿಭಟನೆ - ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್

ರಾಜೇಶ್ವರ ಹೋಬಳಿ ವ್ಯಾಪ್ತಿಯ ಗ್ರಾಮ ಒಂದರ 12 ವರ್ಷದ ಬಾಲಕಿ ಮೇಲೆ, ಶನಿವಾರ ಅದೇ ಗ್ರಾಮದ 25 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿ ನಾಪತ್ತೆಯಾಗಿದ್ದಾನೆ. ಘಟನೆ ಖಂಡಿಸಿ ರಾಷ್ಟ್ರೀಯ ಹೆದ್ದಾರಿ-65 ತಡೆದು ಜನರು ಪ್ರತಿಭಟನೆ ನಡೆಸಿದರು.

punishment-protests-against-rape-accused-of-minor-girl
ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹೆದ್ದಾರಿ ತಡೆದು ಪ್ರತಿಭಟಿಸಿದ ಸಾರ್ವಜನಿಕರು

By

Published : Jan 3, 2021, 11:00 PM IST

ಬಸವಕಲ್ಯಾಣ: ಅಪ್ರಾಪ್ತ ಬಾಲಕಿ ಮೇಲೆ ರೌಡಿಶೀಟರ್ ಒಬ್ಬ ನಡೆಸಿದ ಅತ್ಯಾಚಾರ ಘಟನೆ ಖಂಡಿಸಿ, ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ನಡೆಯಿತು.

ರಾಜೇಶ್ವರ ಹೋಬಳಿ ವ್ಯಾಪ್ತಿಯ ಗ್ರಾಮ ಒಂದರ 12 ವರ್ಷದ ಬಾಲಕಿ ಮೇಲೆ, ಶನಿವಾರ ಅದೇ ಗ್ರಾಮದ 25 ವರ್ಷದ ಯುವಕನೊಬ್ಬ ಅತ್ಯಾಚಾರ ನಡೆಸಿ ನಾಪತ್ತೆಯಾಗಿದ್ದಾನೆ. ಘಟನೆ ಖಂಡಿಸಿ ಸಂತ್ರಸ್ತ ಬಾಲಕಿ ಕುಟುಂಬದ ಸದಸ್ಯರೊಂದಿಗೆ ಸುತ್ತಲಿನ ಗ್ರಾಮಗಳ ಜನರು ರಾಷ್ಟ್ರೀಯ ಹೆದ್ದಾರಿ-65 ತಡೆದು ಪ್ರತಿಭಟನೆ ನಡೆಸಿದರು.

ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಹೆದ್ದಾರಿ ತಡೆದು ಪ್ರತಿಭಟಿಸಿದ ಸಾರ್ವಜನಿಕರು

ಪ್ರತಿಭಟನೆಯಿಂದಾಗಿ ಮುಂಬೈ ಹಾಗೂ ಹೈದ್ರಾಬಾದ್ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ವಾಹನಗಳು ಅನ್ಯ ಮಾರ್ಗವಿಲ್ಲದೆ ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಮನಾಬಾದ ಡಿವೈಎಸ್​​ಪಿ ಸೋಮಲಿಂಗ ಕುಂಬಾರ್, ಸಿಪಿಐ ಮಹೇಶ್‌ಗೌಡ ಪಾಟೀಲ್, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಓದಿ: ನಾಳೆಯಿಂದ ಎರಡು ದಿನಗಳ ಕಾಲ ಶಾಸಕರ ಜೊತೆ ಸಿಎಂ ಸಭೆ

ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಸುಮಾರು ಒಂದುವರೆ ಗಂಟೆಗಳಿಗೂ ಅಧಿಕ ಕಾಲ ಆಕ್ರೋಶ ವ್ಯಕ್ತಪಡಿಸಿದರು.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಆರೋಪಿಯು ರೌಡಿಶೀಟರ್ ಆಗಿದ್ದು, ಹಿಂದೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರ ನಡೆದು ಒಂದು ದಿನ ಕಳೆದರು ಆರೋಪಿಯನ್ನು ಇನ್ನು ಬಂಧಿಸಿಲ್ಲ. ಹೀಗಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಆತನನ್ನು ಹಿಡಿದು ಜೈಲಿಗಟ್ಟುವ ಜೊತೆಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ ಅವರು ಮಾತನಾಡಿ, ಅತ್ಯಾಚಾರ ಮಾಡಿ ತಲೆ ಮರೆಸಿಕೊಂಡಿರುವ ದುಷ್ಕರ್ಮಿಯನ್ನು ಹಿಡಿಯುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಸಾರ್ವಜನಿಕರ ಬೇಡಿಕೆಯಂತೆ ಮುಂದಿನ 24 ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ABOUT THE AUTHOR

...view details