ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತ್ ಸದಸ್ಯರು ವಾರ್ಡ್​​ಗೆ ಸಿಎಂ ಇದ್ದಂತೆ: ಪ್ರಭು ಚವ್ಹಾಣ್ - ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್

ಪಂಚಾಯತ್​ ಸದಸ್ಯರು ಜನರಿಂದ ಆಯ್ಕೆ ಆಗುತ್ತಾರೆ. ಶಾಸಕರಿಗೂ ಜನ ಮತವೇ ಮುಖ್ಯವಾಗಿದ್ದು ಈ ದಿಸೆಯಲ್ಲಿ ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್​​ನ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

Minister Prabhu chowan
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್

By

Published : Jan 7, 2021, 7:03 PM IST

ಬೀದರ್: ಗ್ರಾಮ ಪಂಚಾಯತ್ ಸದಸ್ಯರು ತಮ್ಮ ವಾರ್ಡ್​​ಗೆ ಸಿಎಂ ಇದ್ದಂತೆ. ಸ್ಥಳೀಯ ಸಮಸ್ಯೆಗಳು ಗುರುತಿಸಿ ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ, ನಿರ್ಧಾರ ಕೈಗೊಳ್ಳುವ ಎಲ್ಲಾ ಅಧಿಕಾರವಿದ್ದು ಜನರ ಭಾವನೆಗೆ ಸ್ಪಂದಿಸಿ ಮುಂದಿನ 5 ವರ್ಷಗಳ ಕಾಲ ಅಧಿಕಾರ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸಲಹೆ ನೀಡಿದರು.

ನೂತನ ಗ್ರಾಮ ಪಂಚಾಯತ್ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಚವ್ಹಾಣ್ ಮಾತು

ಜಿಲ್ಲೆಯ ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ನೂತನ ಗ್ರಾಮ ಪಂಚಾಯತ್ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಪಂಚಾಯತ್​ ಸದಸ್ಯರು ಜನರಿಂದ ಆಯ್ಕೆ ಆಗುತ್ತಾರೆ. ಶಾಸಕರಿಗೂ ಜನ ಮತವೇ ಮುಖ್ಯವಾಗಿದ್ದು ಈ ದಿಸೆಯಲ್ಲಿ ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್​​ನ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಮಿಸಲಾತಿ ಪ್ರಕಟವಾಗಿಲ್ಲ ಆಗಲೇ ಅದೆಷ್ಟೋ ಪಂಚಾಯಿತಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕಾಗಿ ರೆಸಾರ್ಟ್ ರಾಜಕಾರಣ ಆರಂಭಿಸಿದ್ದಾರೆ. ಇದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ ಇದು ಸ್ಥಳೀಯ ಸಂಸ್ಥೆಗಳಿಗೆ ಮಾರಕವಾಗಿದೆ‌. ಅತೀ ಹೆಚ್ಚು ಖರ್ಚು ಮಾಡಿ ಅಧಿಕಾರಕ್ಕೆ ಬರುವ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿ ಪಂಚಾಯತ್​​​ನ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ.

ಹೀಗಾಗಿ ಎಲ್ಲಾ ಸದಸ್ಯರು ತಮ್ಮಲ್ಲೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ ಗ್ರಾಮಾಭಿವೃದ್ಧಿ ಮಾಡಿ. ಹೆಚ್ಚಿನ ಅನುದಾನಕ್ಕಾಗಿ ಚಿಂತೆ ಮಾಡಬೇಡಿ ಸರ್ಕಾರಕ್ಕೆ ಪ್ರಸ್ತಾಪಿಸಿ ಎಲ್ಲವೂ ನಾನು ಖುದ್ದಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:ಬಿಎಸ್​ವೈ ಕೆಳಗಿಳಿಸಲು ಹೈಕಮಾಂಡ್ ಹಿಂದೇಟು: ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಇಲ್ಲಿದೆ!

ABOUT THE AUTHOR

...view details