ಬೀದರ್ :ಕೊರೊನಾ ವೈರಸ್ ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದಾಗಿ ಸಂಕಷ್ಟದಲ್ಲಿರುವ ಹಕ್ಕಿಪಿಕ್ಕಿ ಸಮುದಾಯದ 10ಕ್ಕೂ ಅಧಿಕ ಕುಟುಂಬಗಳಿಗೆ ದಂಪತಿಯೊಂದು ಆಸರೆಯಾಗಿದೆ.
ಸಾರ್ಥಕವಾಯ್ತು ನಿಮ್ಮ ಜೀವನ.. ಹಕ್ಕಿಪಿಕ್ಕಿ ಸಮುದಾಯಕ್ಕೆ ಆಸರೆಯಾದ ದಂಪತಿ.. - ಲಾಕ್ ಡೌನ್ ಎಫೆಕ್ಟ್
ಈ ದಂಪತಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸತತ ಒಂದು ವಾರದಿಂದ ಆಹಾರ ಧಾನ್ಯ ಸರಬರಾಜು ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಲಾಕ್ ಡೌನ್: ಸಂಕಷ್ಟದಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಆಸರೆಯಾದ ದಂಪತಿಗಳು...!
ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ನಾಲಂದಾ ಶಾಲೆಯ ಪಕ್ಕದ 10ಕ್ಕೂ ಅಧಿಕ ಕುಟುಂಬಗಳಿಗೆ ಶ್ರೀದೇವಿ ಹಾಗೂ ಇಮಾನ್ಯುವೇಲ್ ದಂಪತಿ ನಿತ್ಯವೂ ಆಹಾರ, ತರಕಾರಿ ಕಿಟ್‌ಗಳನ್ನು ನೀಡಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಈ ದಂಪತಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸತತ ಒಂದು ವಾರದಿಂದ ಆಹಾರ ಧಾನ್ಯ ಸರಬರಾಜು ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಜೊತೆಗೆ ಲಾಕ್‌ಡೌನ್ ಜಾರಿಯಲ್ಲಿರುವವರೆಗೆ ಈ ಕುಟುಂಬಗಳ ಬದುಕಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ದಂಪತಿ ಹೇಳಿಕೊಂಡಿದ್ದಾರೆ.