ಬೀದರ್:ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡಿಲ್ಲ. ಹಾಗೇನಾದರೂ ಬದಲಾಗುವ ಸಾಧ್ಯತೆ ಇದ್ದರೆ ಸಮರ್ಥರನ್ನು ಆಯ್ಕೆ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಹಾಗು ಕಾಂಗ್ರೆಸ್ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಎಂ.ಬಿ.ಪಾಟೀಲ್
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತುಕತೆ ನಡೆದಿರುವುದು ನಿಜ. ಆದರೆ ಅಧ್ಯಕ್ಷರ ಬದಲಾವಣೆಗೊಂಡಿಲ್ಲ, ಈ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎಂ.ಬಿ ಪಾಟೀಲ್ ಹೇಳಿಕೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕ ಮಧುಸೂಧನ ಮಿಸ್ತ್ರಿ ರಾಜ್ಯದ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆ ಆಗುವುದಿದ್ದರೆ ಯಾರನ್ನು ಮಾಡಬಹುದು ಎಂಬ ಚರ್ಚೆ ನಡೆದಿದೆ. ಆದರೆ ಸದ್ಯಕ್ಕೆ ದಿನೇಶ್ ಗುಂಡುರಾವ್ ಅವರೇ ಅಧ್ಯಕ್ಷರಾಗಿದ್ದಾರೆ ಎಂದರು.