ಕರ್ನಾಟಕ

karnataka

ETV Bharat / state

ವಸತಿ ಯೋಜನೆ ಅಕ್ರಮ.. ಏಳು ಪಿಡಿಒಗಳನ್ನ ಅಮಾನತುಗೊಳಿಸಿದ ಬೀದರ್‌ ಡಿಸಿ.. - ವಸತಿ ಯೋಜನೆಯಲ್ಲಿ ಅಕ್ರಮ

ಎಣಕೂರು ಗ್ರಾಪಂ ವ್ಯಾಪ್ತಿಯ 203 ಜನ ಅನರ್ಹ ಫಲಾನುಭವಿಗಳಿಗೆ ಹಣ ವಸೂಲಾತಿಯ ನೋಟಿಸ್ ಜಾರಿ ಮಾಡಲಾಡಗಿದೆ. ಸರ್ಕಾರದ ಹಣವನ್ನು ದುರಪಯೋಗ ಮಾಡಿಕೊಂಡ ಗ್ರಾಪಂ ಖಾತೆಗೆ ಜಮಾ ಮಾಡುವಂತೆ ಸೂಚಿಸಲಾಗಿದೆ..

ವಸತಿ ಯೋಜನೆಯಲ್ಲಿ ಅಕ್ರಮ.
ವಸತಿ ಯೋಜನೆಯಲ್ಲಿ ಅಕ್ರಮ.

By

Published : Feb 2, 2021, 7:58 PM IST

ಬೀದರ್ :ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕರ್ತವ್ಯ ಲೋಪ ಎಸಗಿರುವ ಭಾಲ್ಕಿ ತಾಲೂಕಿನ 7 ಜನ ಪಿಡಿಒಗಳನ್ನು ಅಮಾನತುಗೊಳಿಸಿ ಜಿಪಂ ಸಿಇಒ ಗ್ಯಾನೇಂದ್ರ ಕುಮಾರ ಗಂಗ್ವಾರ್ ಆದೇಶಿಸಿದ್ದಾರೆ.

2015-17 ಹಾಗೂ 2018-19ರಲ್ಲಿ ಭಾಲ್ಕಿ ತಾಲೂಕಿನಲ್ಲಿ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ವಸತಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ವಸತಿ ಇಲಾಖೆಯ ಉನ್ನತ ತಂಡ ಸುದೀರ್ಘ ತನಿಖೆ ನಡೆಸಿ ಅನರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿರುವುದು ಪತ್ತೆಯಾದ ಹಿನ್ನೆಲೆ 7 ಜನ ಪಿಡಿಒಗಳನ್ನು ಜಿಪಂ ಸಿಇಒ ಅಮಾನತುಗೊಳಿಸಿದ್ದಾರೆ.

ಭಾಲ್ಕಿ ತಾಲೂಕಿನ ಬಾಳೂರು ಪಂಚಾಯತ್‌ನ ಸಂಗಮೇಶ ಸಾವಳೆ, ಬೀರಿ(ಬಿ) ಪಂಚಾಯತ್‌ನ ಮಲ್ಲೇಶ್, ಜಾಂತಿ ಪಂಚಾಯತ್‌ನ ರೇವಣಪ್ಪ, ಮೊರಂಬಿ ಪಂಚಾಯತ್‌ನ ರೇಖಾ ಬಿ, ತಳವಾಡ (ಕೆ) ಪಂಚಾಯತ್‌ನ ಚಂದ್ರಶೇಖರ್ ಗಂಗಶೆಟ್ಟಿ, ವರವಟ್ಟಿ ಪಂಚಾಯತ್‌ನ ಸಂತೋಷ್ ಸ್ವಾಮಿ ಹಾಗೂ ಎಣಕೂರು ಗ್ರಾಪಂ ಪ್ರವೀಣಕುಮಾರ್ ಎಂಬಾತರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ.

ಅಲ್ಲದೆ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಭಾಲ್ಕಿ ತಾಲೂಕಿನ ಬಾಳೂರು, ಧನ್ನೂರಾ, ಹಕಬರಗಾ, ಜಾಂತಿ, ಬೀರಿ(ಬಿ), ಮೊರಂಬಿ, ಸಿದ್ದೇಶ್ವರ, ತಳವಾಡ(ಕೆ), ವರವಟ್ಟಿ, ಎಣಕೂರು ಗ್ರಾಪಂ ವ್ಯಾಪ್ತಿಯ 203 ಜನ ಅನರ್ಹ ಫಲಾನುಭವಿಗಳಿಗೆ ಹಣ ವಸೂಲಾತಿಯ ನೋಟಿಸ್ ಜಾರಿ ಮಾಡಲಾಡಗಿದೆ. ಸರ್ಕಾರದ ಹಣವನ್ನು ದುರಪಯೋಗ ಮಾಡಿಕೊಂಡ ಗ್ರಾಪಂ ಖಾತೆಗೆ ಜಮಾ ಮಾಡುವಂತೆ ಸೂಚಿಸಲಾಗಿದೆ.

ABOUT THE AUTHOR

...view details