ಬೀದರ್:ಲಾಕ್ಡೌನ್ ಇಲ್ಲದೆ ಕೊರೊನಾ ನಿಯಂತ್ರಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಲಾಕ್ಡೌನ್ ಇಲ್ಲದೆ ಕೊರೊನಾ ನಿಯಂತ್ರಣವೇ ನಮ್ಮ ಉದ್ದೇಶ: ಗೃಹ ಸಚಿವ ಬೊಮ್ಮಾಯಿ
ಲಾಕ್ಡೌನ್ ವಿಚಾರದಲ್ಲಿ ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಉಹಾಪೋಹ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ವಿಚಾರ ಇಲ್ಲವೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಸಚಿವ ಬೊಮ್ಮಾಯಿ
ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ವಿಚಾರದಲ್ಲಿ ಅನಗತ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಉಹಾಪೋಹ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ವಿಚಾರ ಇಲ್ಲವೇ ಇಲ್ಲ ಎಂದರು.
ಲಾಕ್ಡೌನ್ ಇಲ್ಲದೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಕೊರೊನಾ ನಿಯಂತ್ರಣ ಮಾಡಬಹುದು. ಒಂದಂತೂ ಸತ್ಯ, ಸರ್ಕಾರದ ಮುಂದೆ ಲಾಕ್ಡೌನ್ ಪ್ರಸ್ತಾವನೆ ಇಲ್ಲ ಎಂದರು. ನೈಟ್ ಕರ್ಫ್ಯೂ ಬೇರೆ ಕಡೆಗೆ ವಿಸ್ತರಣೆ ಕುರಿತು ಪರಿಸ್ಥತಿ ಅನುಸಾರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.