ಬೀದರ್:ಮುಂಗಾರು ಹಂಗಾಮು ಕೈಕೊಟ್ಟು, ಮಗಳ ಮದುವೆಗೆ ಪಡೆದಿದ್ದ ಸಾಲ ತೀರಿಸಲಾಗದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಮಲ ನಗರ ತಾಲೂಕಲ್ಲಿ ನಡೆದಿದೆ.
ಸಾಲಬಾಧೆ: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು
ಮುಂಗಾರು ಕೈಕೊಟ್ಟು, ಮಗಳ ಮದುವೆಗೆ ಪಡೆದಿದ್ದ ಸಾಲದ ಬಾಧೆ ತಾಳದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಮಲನಗರ ತಾಲೂಕಿನ ಮಾಳೆಗಾಂವ್ನ ಸೋಮಾನಾಯಕ ತಾಂಡದಲ್ಲಿ ನಡೆದಿದೆ.
ಕ್ರಿಮಿನಾಶಯಕ ಸೇವಿಸಿದ್ದ ರೈತ ಸಾವು
ಮಾಳೆಗಾಂವ್ ಸೋಮಾನಾಯಕ ತಾಂಡದ ನಿವಾಸಿ ಸಂಜು ದೇಶು ಚವ್ಹಾಣ್(40) ಮೃತ ರೈತ. ಕಳೆದ ನಾಲ್ಕು ದಿನಗಳ ಹಿಂದೆ ಹೊಲದಲ್ಲಿ ತೊಗರಿ ಬೆಳೆಗೆ ಸಿಂಪಡನೆ ಮಾಡಲು ತಂದಿದ್ದ ಕ್ರೀಮಿನಾಶಕ ಸೇವಿಸಿ ಅಸ್ವಸ್ಥನಾಗಿದ್ದ ರೈತನಿಗೆ ಔರಾದ್ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಸಾವನ್ನಪ್ಪಿದ್ದಾನೆ.
ಪಿಕೆಪಿಎಎಸ್ ಕರಕ್ಯಾಳ ಡಿಸಿಸಿ ಬ್ಯಾಂಕ್ ಸೇರಿದಂತೆ ಖಾಸಗಿಯವರ ಬಳಿಯಿಂದ ಅಂದಾಜು 3 ಲಕ್ಷ ರೂಪಾಯಿಯಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗ್ತಿದೆ. ಹೊಕ್ರಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Last Updated : Nov 15, 2019, 11:56 AM IST