ಬಸವಕಲ್ಯಾಣ(ಬೀದರ್) :ಮಗನಿಗೆ ಈಜು ಕಲಿಸಲು ಹೋಗಿ ಇಬ್ಬರೂ ಸಾವಿಗೀಡಾದ ದಾರುಣ ಘಟನೆ ತಾಲೂಕಿನ ಬಗದೂರಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸೂರ್ಯಕಾಂತ ಚಂದ್ರಶಾಕೇಶ್ವರ(42) ಹಾಗೂ ಅಭಿಷೇಕ್ ಸೂರ್ಯಕಾಂತ(16) ಎಂಬುವರು ಮೃತ ತಂದೆ- ಮಗ.
ಬಸವಕಲ್ಯಾಣ : ಬಾವಿಯಲ್ಲಿನ ಕೆಸರಿಗೆ ಸಿಲುಕಿ ತಂದೆ-ಮಗ ಸಾವು - ಈಜು ಕಲಿಯಲು ಹೋಗಿ ತಂದೆ ಮಗ ಸಾವು
ಸುದ್ದಿ ತಿಳಿದ ಮುಡಬಿ ಠಾಣೆ ಪಿಎಸ್‌ಐ ಬಸಲಿಂಗಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳದಲ್ಲೇ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ತನ್ನ 16 ವರ್ಷದ ಪುತ್ರ ಅಭಿಷೇಕ್ಗೆ ಈಜು ಕಲಿಸಲೆಂದು ಬಾವಿಗೆ ತೆರಳಿದ್ದ ಸೂರ್ಯಕಾಂತ, ಮೊದಲು ಮಗನಿಗೆ ನೀರಿನಲ್ಲಿ ಇಳಿಯುವಂತೆ ತಿಳಿಸಿದ್ದಾರೆ. ಅಭಿಷೇಕ್ ನೀರಿನಲ್ಲಿ ಇಳಿಯುತಿದ್ದಂತೆ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಇದನ್ನು ಗಮನಿಸಿದ ತಂದೆ ಪುತ್ರನ ರಕ್ಷಣೆಗೆಂದು ನೀರಿಗೆ ಜಿಗಿದಿದ್ದಾನೆ. ಪರಿಣಾಮ ಇಬ್ಬರು ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಪ್ರಾಣ ಬಿಟ್ಟಿದ್ದಾರೆ.
ಸುದ್ದಿ ತಿಳಿದ ಮುಡಬಿ ಠಾಣೆ ಪಿಎಸ್‌ಐ ಬಸಲಿಂಗಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳದಲ್ಲೇ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಈಜು ಕಲಿಯಲು ಹೋಗಿ ತಂದೆ ಮಗ ಸಾವು