ಕರ್ನಾಟಕ

karnataka

ETV Bharat / state

ಹದಗೆಟ್ಟ ರಸ್ತೆ ಸಂಚಾರಕ್ಕೆ ಸಿಕ್ತು ಮುಕ್ತಿ: ಇದು ಈಟಿವಿ ಭಾರತ ಇಂಪ್ಯಾಕ್ಟ್ - ಎಕಂಬಾ-ಮುರ್ಕಿ ರಸ್ತೆ

ಬೀದರ್ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಹದಗೆಟ್ಟ ರಸ್ತೆಯಿಂದಾಗಿ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಎಕಂಬಾ-ಮುರ್ಕಿ ರಸ್ತೆ ದುಸ್ಥಿತಿ ಬಗ್ಗೆ ಈ ಟಿವಿ ಭಾರತದ ವಿಸ್ತೃತ ವರದಿ ಬಿತ್ತರಿಸಿದ್ದು, ಇದೀಗ ಸಾರ್ವಜನಿಕರಿಗೆ ತೊಂದರೆಯಿಂದ ಮುಕ್ತಿ ಸಿಕ್ಕಿದೆ.

ಹದಗೆಟ್ಟ ರಸ್ತೆ ಸಂಚಾರಕ್ಕೆ ಸಿಗ್ತು ಮುಕ್ತಿ- ಇದು ಈಟಿವಿ ಭಾರತ ಇಂಪ್ಯಾಕ್ಟ್

By

Published : Aug 22, 2019, 10:28 PM IST

ಬೀದರ್: ಎರಡು ವರ್ಷಗಳಿಂದ ಹದಗೆಟ್ಟ ಎಕಂಬಾ-ಮುರ್ಕಿ ರಸ್ತೆ ದುಸ್ಥಿತಿಯಿಂದಾಗಿ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿದ್ದು, ಇದೀಗ ಸಾರ್ವಜನಿಕರಿಗೆ ತೊಂದರೆಯಿಂದ ಮುಕ್ತಿ ಸಿಕ್ಕಿದೆ.

ಹದಗೆಟ್ಟ ರಸ್ತೆ ಸಂಚಾರಕ್ಕೆ ಸಿಕ್ತು ಮುಕ್ತಿ- ಇದು ಈಟಿವಿ ಭಾರತ ಇಂಪ್ಯಾಕ್ಟ್

ಔರಾದ್ ತಾಲೂಕಿನ ಎಕಂಬಾ-ಮುರ್ಕಿ ರಾಜ್ಯ ಹೆದ್ದಾರಿ 122 ಸಂಪೂರ್ಣವಾಗಿ ಗುಂಡಿಗಳಾಗಿ ನಿರ್ಮಾಣವಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದರು. ರಸ್ತೆ ಗುಂಡಿಯಲ್ಲಿ ಬಿದ್ದು ಮೂವರು ಬೈಕ್ ಸವಾರರು ಗಾಯಗೊಂಡಿದ್ದರು. ಈ ಕುರಿತು 'ಈ ಟಿವಿ ಭಾರತ' ಗುಂಡಿಗಳ ನಡುವೆಯ ರಸ್ತೆಯೋ, ರಸ್ತೆ ನಡುವೆ ಗುಂಡಿಗಳೋ...! ಎಂಬ ತಲೆ ಬರಹದಡಿಯಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ವರದಿ ಗಮನಿಸಿದ ಲೋಕೊಪಯೋಗಿ ಒಳನಾಡು ಮತ್ತು ಬಂದರು ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಎಕಂಬಾದಿಂದ ಡೊಂಗರಗಾಂವ್ ವರೆಗೆ ಅಂದಾಜು 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಹದಗೆಟ್ಟ ರಸ್ತೆ ಅಗೆದು ಹೊಸ ರಸ್ತೆ ಮಾಡ್ತಿರುವ ಇಲಾಖೆ ಕೆಲಸವನ್ನು ಕಂಡ ಸ್ಥಳೀಯರು, ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಈಟಿವಿ ಭಾರತ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details