ಕರ್ನಾಟಕ

karnataka

ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಿ ನಾರಾಯಣರಾವ್​ ಆತ್ಮಕ್ಕೆ ಶಾಂತಿ ದೊರೆಕಿಸಿಕೊಡಿ: ಡಿಕೆ ಶಿವಕುಮಾರ್

By

Published : Nov 25, 2020, 3:48 AM IST

ಬಿ.ನಾರಾಯಣರಾವ್ ಅವರು ತಮ್ಮ ಬದುಕಿನುದ್ದಕ್ಕೂ ಮಾಡಿದಂತಹ ಹೋರಾಟ, ಅವರು ವಿಧಾನ ಸಭೆಯಲ್ಲಿ ಸಂವಿಧಾನದ ಕುರಿತು ಮಾಡಿದ ಭಾಷಣ, ಇಲ್ಲಿ ನಡೆಸಿದಂತಹ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರುಕೂಡ ಅವರ ಭಾವನೆಗಳು, ವಿಚಾರಗಳು ಇಂದು ನಮ್ಮ ಮಧ್ಯೆ ಬದುಕಿ ಉಳಿದಿವೆ ಎಂದು ಡಿಕೆಶಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆ ಮನವಿ
ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆ ಮನವಿ

ಬಸವಕಲ್ಯಾಣ: ದಿವಂಗತ ಶಾಸಕ ಬಿ.ನಾರಾಯಣರಾವ್ ಅವರ ಬದುಕು, ಭಾವನೆ ಮತ್ತು ಹೋರಾಟ ನಮ್ಮ ಮಧ್ಯೆ ಇವೆ. ಅವರ ವಿಚಾರಧಾರೆಯನ್ನು ಮುಂದುವರಿಸಲು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಸವಕಲ್ಯಾಣ ಜನತೆಯನ್ನು ಮನವಿ ಮಾಡಿದ್ದಾರೆ.

ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ದಿ.ಶಾಸಕ ಬಿ.ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಿದ್ದ ಶೃದ್ದಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಂದು ಮನೆ ಕೂಡ ಮಾಡದೆ ಜನಸೇವೆಯೇ ತಮ್ಮ ಪರಮ ಧ್ಯೇಯನ್ನಾಗಿಸಿಕೊಂಡಿದ್ದ ಶಾಸಕ ಬಿ.ನಾರಾಯಣರಾವ್ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಬಿ.ನಾರಾಯಣರಾವ್ ಅವರು ತಮ್ಮ ಬದುಕಿನುದ್ದಕ್ಕೂ ಮಾಡಿದಂತಹ ಹೋರಾಟ, ಅವರು ವಿಧಾನ ಸಭೆಯಲ್ಲಿ ಸಂವಿಧಾನದ ಕುರಿತು ಮಾಡಿದ ಭಾಷಣ, ಇಲ್ಲಿ ನಡೆಸಿದಂತಹ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಕೂಡ ಅವರ ಭಾವನೆಗಳು, ವಿಚಾರಗಳು ಇಂದು ನಮ್ಮ ಮಧ್ಯೆ ಬದುಕಿ ಉಳಿದಿವೆ. ಅವರ ಭಾವನೆ, ವಿಚಾರಗಳು ಈ ಕ್ಷೇತ್ರದಲ್ಲಿ ಶಾಸ್ವತವಾಗಿ ಉಳಿಯಬೇಕು ಎಂದರು.

ಈ ಕ್ಷೇತ್ರದ ಮಹಾಜನರು ಪಕ್ಷ ಭೇಧ, ಜಾತಿ, ಧರ್ಮದ ಭೇದ ಮಾಡದೆ ಸಕ್ರಿಯ ಕಾರ್ಯಕರ್ತನಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದೀರಿ. ಸರಳ ಜೀವನಕ್ಕೆ ಮತ್ತೊಂದು ಹೆಸರು ನಾರಾಯಣರಾವ್ ಅನ್ನೋದು ಮರೆಯುವಂತಿಲ್ಲ. ಇವತ್ತು ನಾವು ಅವರ ಉಸಿರು, ಅವರ ಜೀವನ, ಅವರ ಬದುಕು ನೆನಪಿಟ್ಟುಕೊಳ್ಳಬೇಕಾದರೆ ಜನರು ಯಾವ ಆಮಿಷಗಳಿಗೂ ಒಳಗಾಗದೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಆಯ್ಕೆ ಮಾಡಬೇಕು ಎಂದರು.

ಉಪ ಚುನಾವಣೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಸಿದ್ಧಾಂತ, ಪಕ್ಷ ಮುಖ್ಯ. ಯಾರೇ ಅಭ್ಯರ್ಥಿಯಾಗಲಿ ಎಲ್ಲರು ಸೇರಿ ಅವರನ್ನು ಗೆಲ್ಲಿಸುವ ಮೂಲಕ ಬಿ.ನಾರಾಯಣರಾವ್ ಅವರ ಆತ್ಮಕ್ಕೆ ಶಾಂತಿ ಕೊಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಅವರು. ಬಿ.ನಾರಾಯಣರಾವ ಅವರ ಪತ್ನಿ ಮಲ್ಲಮ್ಮ ಹಾಗೂ ಅವರ ಪುತ್ರರು ಸೇರಿದಂತೆ ಅವರ ಕುಟುಂಬದೊಂದಿಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ನೀಡಿದರು.

ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಡಿಕೆಶಿ ಮನವಿ

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಹಿಂದುಳಿದ ವರ್ಗದ ನಾಯಕ, ಹೋರಾಟಗಾರ, ಬಡವರಪರ, ಜನ ಸಾಮಾನ್ಯರ ಪರ ಶಾಸಕರಾಗಿದ್ದ ಬಿ.ನಾರಾಯಣರಾವ್ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಕೊರೊನಾ ಸಂದರ್ಭದಲ್ಲಿ ಎಲ್ಲಾ ಶಾಸಕರಿಗಿಂತಲು ಮುಂಚಿತವಾಗಿ ಕ್ಷೇತ್ರದಲ್ಲಿ ಬಡ ಜನರಿಗೆ ಸಹಾಯ ಮಾಡಿ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಕ್ಷೇತ್ರದಲ್ಲಿ ಅಲ್ಪ ಅವಧಿಯಲ್ಲಿಯೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಪ್ರೀಯತೆಗಳಿಸಿಕೊಂಡಿದ್ದರು. ಅನುಭವ ಮಂಟಪ ನಿರ್ಮಾಣ ಸೇರಿದಂತೆ ಅನೇಕ ಮಹತ್ವದ ಅಭಿವೃದ್ಧಿ ಕೆಲಸಗಳನ್ನು ಮಾಡುವ ಕನಸುಕಟ್ಟಿಕೊಂಡಿದ್ದ ಶಾಸಕ ಬಿ.ನಾರಾಯಣರಾವ್ ಅವರ ನಿಧನದಿಂದ ಕ್ಷೇತ್ರದ ಅಭಿವೃದ್ದಿಗೆ ಭಾರಿ ಹಿನ್ನೆಡೆಯಾಗಿದೆ. ಕ್ಷೇತ್ರದ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ದಿ.ಶಾಸಕ ಬಿ.ನಾರಾಯಣರಾವ್ ಅವರ ಕನಸುಗಳನ್ನು ಪೂರ್ಣಗೊಳಿಸಲು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ಡಾ. ಅಜಯಸಿಂಗ್, ಎಂಎಲ್ಸಿಗಳಾದ ವಿಜಯಸಿಂಗ್, ಡಾ.ಚಂದ್ರಶೇಖರ್ ಪಾಟೀಲ್, ಅರವಿಂದ ಅರಳಿ, ಮಾಜಿ ಸಚಿವರಾದ ಡಾ: ಶರಣ ಪ್ರಕಾಶ ಪಾಟೀಲ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರನಾಥ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶಟ್ಟಿ, ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ದಿ.ಶಾಸಕ ಬಿ.ನಾರಾಯಣರಾವ ಅವರ ಪತ್ನಿ ಮಲ್ಲಮ್ಮ, ಸೇರಿದಂತೆ ಕ್ಷೇತ್ರದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details