ಬೀದರ್: ತನ್ನ ಫೋಟೊ ಕ್ಲಿಕ್ಕಿಸಿದ್ದಾನೆಂದು ಶಂಕೆ ವ್ಯಕ್ತಪಡಿಸಿ ಯುವಕನೋರ್ವನ ಮತ್ತೋರ್ವ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕದ್ದುಮುಚ್ಚಿ ಫೋಟೋ ಕ್ಲಿಕ್ಕಿಸಿದ ಗುಮಾನಿ: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ! - kannada news
ತಪ್ಪು ಗ್ರಹಿಕೆಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಚಟನಳ್ಳಿ ಗ್ರಾಮದ ಯುವಕ ಆಕಾಶ ಬೆಣ್ಣೆ ಎಂಬಾತ ತನ್ನ ಮೊಬೈಲ್ನಲ್ಲಿ ಕದ್ದು ಫೋಟೋ ಕ್ಲಿಕ್ಕಿಸಿದ್ದಾನೆ ಎಂಬ ಅನುಮಾನದಿಂದ ಅದೇ ಗ್ರಾಮದ ಮಹೇಶ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಊರ ಚಾವಡಿ ಮೇಲೆ ಕುಳಿತಿದ್ದ ವೇಳೆ ಆಕಾಶ್ ತನ್ನ ಕೈಯಲ್ಲಿದ್ದ ಮೊಬೈಲ್ನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಇದನ್ನೇ ತಪ್ಪಾಗಿ ಗ್ರಹಿಸಿದ ಮಹೇಶ್ ಕೋಪದಿಂದ ಆಕಾಶ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಆಕಾಶ್ನ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.