ಬೀದರ್:ಮನೆ ಮೇಲ್ಛಾವಣಿ ಕುಸಿದು 6 ಜನ ಸಾವಿಗೀಡಾದ ಪ್ರಕರಣ ಬುಧವಾರ ಜಿಲ್ಲೆಯಲ್ಲಿ ಬಸವಕಲ್ಯಾಣದಲ್ಲಿ ನಡೆದಿತ್ತು. ಇಂದು ಸಿಎಂ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ 24 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ವಿತರಿಸಿದರು.
ಬಸವಕಲ್ಯಾಣ ದುರಂತ: ಮನೆ ಮಾಲೀಕನಿಗೆ ಪರಿಹಾರದ ಚೆಕ್ ವಿತರಿಸಿದ ಸಿಎಂ - ಸಾಂತ್ವನ
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಬುಧವಾರ ಒಂದೇ ಕುಟುಂಬದ 6 ಜನ ಸದಸ್ಯರು ಸಾವನ್ನಪ್ಪಿದ್ದರು. ಮೇಲ್ಛಾವಣಿ ಕುಸಿದ್ದ ಮನೆ ಮಾಲೀಕ ಯುಸೂಫ್ ಅವರಿಗೆ ಇಂದು ಸಿಎಂ ಕುಮಾರಸ್ವಾಮಿ ಪರಿಹಾರದ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
6 ಜನ ದುರಂತ ಸಾವಿಗೀಡಾದ ಮನೆಗೆ ಸಿಎಂ ಭೇಟಿ
ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿರುವ ಹಳೆ ಮನೆಯೊಂದರ ಮಣ್ಣಿನ ಮಾಳಿಗೆ ಕುಸಿದು ಈ ಅವಘಡ ಸಂಭವಿಸಿತ್ತು. ದುರಂತದಲ್ಲಿ ನದೀಮ್ ಶೇಕ್ ಯುಸೂಬ್ ಶೇಕ್ (45), ಇವರ ಪತ್ನಿ ಫರೀದಾ ಬೇಗ್ಂ (34), ಮಕ್ಕಳಾದ ಆಯುಷಾ ಬಾನು (15), ಮೇಹತಾಬಿ (14), ಫಜಾನಲಿ (09) ಹಾಗೂ ಫರಾನ್ ಅಲಿ (05) ಮೃತಪಟ್ಟಿದ್ದರು.
ಮನೆ ಮಾಲೀಕ ಯುಸೂಫ್ ಅವರಿಗೆ ಪರಿಹಾರ ಚೆಕ್ ಅನ್ನು ಸಿಎಂ ಕುಮಾರಸ್ವಾಮಿ ವಿತರಿಸಿದರು. ಈ ವೇಳೆ ಸಚಿವರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಕಾಶೆಂಪೂರ್, ರಹೀಂಖಾನ್, ಶಾಸಕ ಬಿ. ನಾರಾಯಣರಾವ್ ಸಾಥ್ ನೀಡಿದ್ರು.