ಬೀದರ್: ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರಭು ಚೌವ್ಹಾಣ ಅವರನ್ನು ಸಂಪುಟ ಸಚಿವರಾಗಿ ಮಾಡುವ ಮೂಲಕ ಬೀದರ್ಗೆ ನ್ಯಾಯ ಕೊಟ್ಟಿದ್ದಾರೆ ಎಂದು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲುಂಬಿಣಿ ಗೌತಮ ಅಭಿಪ್ರಾಯಪಟ್ಟಿದ್ದಾರೆ.
ಔರಾದ್ ಮಿಸಲು ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಭು ಚೌವ್ಹಾಣ ಅವರನ್ನು ಗುರುತಿಸಿದ್ದಲ್ಲದೆ, ಹಿಂದಿನ ಬಿಜೆಪಿ ಸರ್ಕಾರದ ವೇಳೆಯಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹೊರಗಿನ ನಾಯಕರ ಹೊಣೆಯಾಗ್ತಿತ್ತು. ಈ ಬಾರಿ ಇಷ್ಟೊಂದು ಪೈಪೋಟಿ ಇದ್ದರು ಬೀದರ್ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ಮೂಲಕ ಸಿಎಂ ಬಿಎಸ್ವೈ ಅವರು ನ್ಯಾಯ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ-ಕಾಂಗ್ರೆಸ್ ಯುವ ಘಟಕ ಪ್ರಭು ಚೌವ್ಹಾಣರ ಮುಂದೆ ನೂರೆಂಟು ಸವಾಲುಗಳು:
ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಮೂವರು ಸಚಿವರಿದ್ದೂ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಹೇಳ್ತಿದ್ದ ಪ್ರಭು ಚೌವ್ಹಾಣ ಅವರು ಈಗ ಸಚಿವರಾಗಿ ಯಾವ ರೀತಿ ಅಭಿವೃದ್ಧಿ ಮಾಡ್ತಾರೆ ಅಂತಾ ನೋಡೊಣ ಎಂದು ಯುವ ಕಾಂಗ್ರೆಸ್ ಘಟಕದ ನಾಯಕ ಆನಂದ ದೇವಪ್ಪ ಸವಾಲು ಹಾಕಿದ್ದಾರೆ.
ಸಚಿವ ಸ್ಥಾನದಲ್ಲಿದ್ದವರು ಕಡತಗಳ ವಿಲೇವಾರಿ ಮಾಡಬೇಕಾಗುತ್ತೆ. ಪ್ರಭು ಚೌವ್ಹಾಣ ಅವರಿಗೆ ಭಾಷಾ ಸಮಸ್ಯೆ ಇದೆ. ಕನ್ನಡ ಬರೆಯಲು, ಓದಲು ಬರುವುದಿಲ್ಲ, ಮಾತನಾಡುವಲ್ಲೂ ಎಡವಟ್ಟು ಮಾಡುತ್ತಾರೆ. ಅವರ ನಡೆಯನ್ನು ಕಾಂಗ್ರೆಸ್ ಗಮನಿಸಿ ಕಾಲ ಕಾಲಕ್ಕೆ ಎಚ್ಚರಿಸುವ ಕೆಲಸ ಮಾಡಲಿದೆ ಎಂದು ಆನಂದ ದೆವಪ್ಪ ಹೇಳಿದರು.