ಬೀದರ್: ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರದರ್ಶಿಸಿದ್ದ ಸಿಎಎ ವಿರೋಧಿ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಸಿರುವ ಆರೋಪದ ಮೇಲೆ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿನಿವೋರ್ವಳ ತಾಯಿ ನಜಬುನ್ನಿಸಾ ವಿರುದ್ಧ ಪ್ರಕರಣ ದಾಖಲಿಸಿ ಬಳಿಕ ಬಂಧಿಸಲಾಗಿತ್ತು. ಈ ಬಗ್ಗೆ ಜಾಮೀನು ಕೋರಿ ಇಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಜಾಮೀನು ಅರ್ಜಿ ಆದೇಶ ಇಂದು ಪ್ರಕಟವಾಗುವ ಸಾಧ್ಯತೆ ಇದೆ.
ನೀತಿ ಭ್ರಷ್ಟತೆ ಅಥವಾ ತಪ್ಪು ದಾರಿಗೆ ಎಳೆಯುವಿಕೆ ಆರೋಪದಲ್ಲಿ ಬಂಧನದಲ್ಲಿರುವ ಮುಖ್ಯ ಶಿಕ್ಷಕಿ ಹಾಗೂ ಬಾಲಕಿಯ ತಾಯಿಯ ಜಾಮೀನು ಅರ್ಜಿಯ ಮತ್ತಷ್ಟು ವಿಚಾರಣೆಯಾಗುವ ಸಾಧ್ಯತೆ ಇದೆ. ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಕಳೆದ ಫೆ.11 ರಂದು ವಾದ ಪ್ರತಿವಾದ ನಡೆದು ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು ಜಾಮೀನು ಅರ್ಜಿಯ ಆದೇಶವನ್ನು ಫೆ. 14(ಇಂದು) ಗೆ ಕಾಯ್ದಿರಿಸಿದ್ದರು.