ಕರ್ನಾಟಕ

karnataka

ETV Bharat / state

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಜೈಲು ಅಧಿಕಾರಿ.. - ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿ ಬಸವರಾಜ್

ಜೈಲಿನಲ್ಲಿ ಕೈದಿಯಾಗಿರುವ ರೇವಣ್ಣ ಸಿದ್ದಯ್ಯ ಎಂಬಾತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗಲು ಕೈದಿಯ ಸಂಬಂಧಿಕ ಆದರ್ಶ, ಜೈಲು ಸಹಾಯಕ ಬಸವರಾಜ್‌ರನ್ನ ಕೇಳಿಕೊಂಡಾಗ ಒಂದು ಲಕ್ಷ ರೂ. ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು..

Attack by ACB officers
ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಜೈಲು ಅಧಿಕಾರಿ

By

Published : Jan 26, 2021, 4:39 PM IST

ಬೀದರ್ :ಜೈಲು ಅಧಿಕಾರಿಯೋರ್ವ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಓದಿ: ಅಕ್ರಮ ಸಂಬಂಧ: ವಿಧವೆಯೊಂದಿಗೆ ಬೆತ್ತಲಾದ ಯುವಕ, ಬ್ಲ್ಯಾಕ್ ಮೇಲ್​ಗೆ ಹೆದರಿ ಆತ್ಮಹತ್ಯೆ

ನಗರದ ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಅಧಿಕಾರಿ ಬಸವರಾಜ್ ಎಂಬಾತ, ಆದರ್ಶ ಎಂಬ ವ್ಯಕ್ತಿಯಿಂದ 90 ಸಾವಿರ ರೂಪಾಯಿ ಲಂಚ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜೈಲಿನಲ್ಲಿ ಕೈದಿಯಾಗಿರುವ ರೇವಣ್ಣ ಸಿದ್ದಯ್ಯ ಎಂಬಾತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆ ಕರೆದುಕೊಂಡು ಹೋಗಲು ಕೈದಿಯ ಸಂಬಂಧಿಕ ಆದರ್ಶ, ಜೈಲು ಸಹಾಯಕ ಬಸವರಾಜ್‌ರನ್ನ ಕೇಳಿಕೊಂಡಾಗ ಒಂದು ಲಕ್ಷ ರೂ. ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು.

₹90 ಸಾವಿರ ಹಣ ನೀಡುವಾಗ ಎಸಿಬಿ ಎಸ್​​ಪಿ ಮಹೇಶ ಮೇಗನವರ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಸಹಾಯಕ ಜೈಲರ್​​ನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ABOUT THE AUTHOR

...view details