ಬೀದರ್:ಬೈಕ್ ಮೇಲೆ ಅಕ್ರಮವಾಗಿ ಎರಡು ಲಕ್ಷ ಮೌಲ್ಯದ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದವನ ಬಂಧನ; 2 ಲಕ್ಷ ರೂ ಮೌಲ್ಯದ ಮಾಲು ಜಪ್ತಿ - bidar news
ಬೈಕ್ ಮೇಲೆ ಅಕ್ರಮವಾಗಿ ಎರಡು ಲಕ್ಷ ಮೌಲ್ಯದ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದವನ ಬಂಧನ..2 ಲಕ್ಷ ಮೌಲ್ಯದ ಗಾಂಜಾ ಜಪ್ತಿ
ಜಿಲ್ಲೆಯ ಕಮಲನಗರ ತಾಲೂಕಿನ ತೋರ್ಣಾ ಕ್ರಾಸ್ ಬಳಿ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಬೈಕ್ ಮೇಲೆ ಗಾಂಜಾ ಸಾಗಾಟ ಮಾಡ್ತಿದ್ದ ಮಹಾರಾಷ್ಟ್ರ ಮೂಲದ ಲಕ್ಷ್ಮಣ ಚವ್ಹಾಣ ಎಂಬಾತ ಅಬಕಾರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.12 ಪ್ಯಾಕೆಟ್ಗಳಲ್ಲಿ 24 ಕೆ.ಜಿ. ಗಾಂಜಾ ಸಾಗಾಟ ಮಾಡ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಸಹಾಯಕ ಜಿಲ್ಲಾಧಿಕಾರಿ ಅನಿಲ್ಕುಮಾರ್ ಪೊದ್ದಾರ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.