ಬಸವಕಲ್ಯಾಣ: ಬಿಸಿಲಿನ ತಾಪದಿಂದ ಬಳಲಿದ್ದ ಕೃಷಿಕನೊಬ್ಬ ಬಾಯಾರಿಕೆ ನೀಗಿಸಿಕೊಳ್ಳಲು ನೀರು ಎಂದು ಭಾವಿಸಿ ಕ್ರಿಮಿನಾಶಕ ಔಷಧಿ ಕುಡಿದು ಸಾವಿಗೀಡಾದ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.
ತೀವ್ರ ಬಾಯಾರಿಕೆ: ನೀರು ಎಂದು ತಿಳಿದು ಕೀಟನಾಶಕ ಕುಡಿದ ರೈತ ಸಾವು - ಬೀದರ್ ಸುದ್ದಿ
ತನ್ನ ಜಮೀನಿನಲ್ಲಿ ತರಕಾರಿ ಹಾಗೂ ಕಬ್ಬು ಬೆಳೆಗೆ ಕೀಟನಾಶಕ ಔಷಧಿ ಸಿಂಪಡಿಸುತ್ತಿದ್ದ ರೈತ ನೀರು ಎಂದು ತಿಳಿದು ಕೀಟನಾಶಕ ಕುಡಿದ ಪರಿಣಾಮ ಸಾವನ್ನಪ್ಪಿದ್ದಾನೆ. ಬೀದರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ನೀರು ಎಂದು ತಿಳಿದು ಔಷದ ಕುಡಿದು ವ್ಯಕ್ತಿ ಸಾವು
ರವಿಕುಮಾರ ಗುರುಲಿಂಗಪ್ಪ ಹುಮನಾಬಾದೆ (45) ಮೃತ ವ್ಯಕ್ತಿ. ರಾಜೇಶ್ವರ ಸಮೀಪದ ಇಸ್ಲಾಂಪುರ ವ್ಯಾಪ್ತಿಯಲ್ಲಿನ ತನ್ನ ಜಮೀನಿನಲ್ಲಿ ತರಕಾರಿ ಹಾಗೂ ಕಬ್ಬು ಬೆಳೆಗೆ ಕೀಟನಾಶಕ ಔಷಧಿ ಸಿಂಪಡಿಸುತ್ತಿದ್ದ ಈತ, ಬೆವರಿಳಿಸುವ ಬಿಸಿಲಿನ ಝಳದಿಂದ ತತ್ತರಿಸಿ ಬಾಯಾರಿಕೆ ನೀಗಿಸಿಕೊಳ್ಳಲು ಬಾಟಲಿಯಲ್ಲಿನ ನೀರು ಕುಡಿಯುವ ಬದಲು ಪಕ್ಕದಲ್ಲೇ ಮತ್ತೊಂದು ಬಾಟಲಿಯಲ್ಲಿದ್ದ ಔಷಧಿ ಕುಡಿದಿದ್ದಾನೆ ಎನ್ನಲಾಗ್ತಿದೆ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವಸೀಮ್ ಪಟೇಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.