ಬೀದರ್ :ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವಿಗೆ 'ನರೇಂದ್ರ' ಎಂದು ದಂಪತಿ ನಾಮಕರಣ ಮಾಡಿದ್ದಾರೆ.
ಚಿಟಗುಪ್ಪ ತಾಲೂಕಿನ ನಿರ್ಣಾವಾಡಿಯ ಅಂಬಿಕಾ ವೀರಶೆಟ್ಟಿ ರಂಜೇರಿ ತಮ್ಮ ಮಗನಿಗೆ 'ನರೇಂದ್ರ' ಎಂದು ಹೆಸರಿಟ್ಟಿದ್ದಾರೆ. ಪ್ರಧಾನಿ ಮೋದಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತಸವಾಗಿದೆ. ಹೀಗಾಗಿ, ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದರು.