ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಹು ನಿರೀಕ್ಷೆಯ ಚಲನಚಿತ್ರ 'ಯುವರತ್ನ' ಹೊಸಪೇಟೆಯ ನಾಲ್ಕು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಹೊಸಪೇಟೆಯ ನಾಲ್ಕು ಚಿತ್ರ ಮಂದಿರದಲ್ಲಿ ಯುವರತ್ನ ಬಿಡುಗಡೆ ನಗರದಲ್ಲಿ ಒಟ್ಟು ನಾಲ್ಕು ಚಿತ್ರಮಂದಿರಗಳಿದ್ದು, ಲಕ್ಷ್ಮಿ, ಸ್ವರಸ್ವತಿ, ಮೀರಾಲಂ ಹಾಗೂ ಬಾಲ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಜೊತೆಗೆ ಮೀರಾಲಂ ಮತ್ತು ಬಾಲ ಚಿತ್ರಮಂದಿರಗಳಲ್ಲಿ ಬೆಳಗ್ಗೆ 5 ಗಂಟೆಗೆ ಮೊದಲ ಶೋ ಪ್ರಾರಂಭವಾಯಿತು. ಸಿನಿಮಾ ವೀಕ್ಷಣೆಗಾಗಿ ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಕಾತುರದಿಂದ ಕಾದು ಕುಳಿತಿದ್ದರು.
ಇನ್ನು ಕಿಕ್ಕಿರಿದು ನಿಂತಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮೊದಲ ಶೋ ಪ್ರಾರಂಭವಾದ ಹಿನ್ನೆಲೆ ಅಪ್ಪು ಅಭಿಮಾನಿ ಬಳಗದಿಂದ ಸಂಭ್ರಮ ಮನೆ ಮಾಡಿತ್ತು.
'ನಟ ಸಾರ್ವಭೌಮ' ಚಿತ್ರದ ಬಳಿಕ ಒಂದೆರಡು ಚಿತ್ರಗಳಲ್ಲಿ ಮಾತ್ರ ವಿಶೇಷ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದರು. ಹೀಗಾಗಿ ಬೆಳ್ಳಿತೆರೆ ಮೇಲೆ ಪುನೀತ್ ರಾಜ್‌ಕುಮಾರ್ ಅವರ ಪವರ್‌ಫುಲ್ ಪರ್ಫಾಮೆನ್ಸ್ ನೋಡಬೇಕು ಎಂದು ಎರಡು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಕನವರಿಕೆ ಇಂದು ಈಡೇರಿದೆ.