ಬಳ್ಳಾರಿ: ನಗರದಲ್ಲಿ ಸಂಗಮ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಿಲ್ಲಾ ಸಮಿತಿಯಿಂದ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದರು.
ಸಿಎಎ,ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ನೂರಾರು ಮಹಿಳೆಯರಿಂದ ಪ್ರತಿಭಟನೆ..
ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಇದೊಂದು ಮಹಿಳಾ ವಿರೋಧಿ ಕಾನೂನುಗಳಾಗಿವೆ. ಇದನ್ನು ವಾಪಸ್ ತೆಗೆದುಕ್ಕೊಳ್ಳೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರ ಸರ್ಕಾರ ಭೇಟಿ ಪಡಾವೋ ಭೇಟಿ ಬಚಾವೋ ಅಂತಾ ಹೇಳಿದ್ರು. ಆದರೆ, ಭೇಟಿ ಬಚಾವೋ ಆಗುತ್ತಿಲ್ಲ. ಆದರೆ, ಮಹಿಳೆಯರನ್ನು ದೇಶ ಬಿಟ್ಟು ಹೋಗಿ ಎನ್ನುವ ಧೋರಣೆಯನ್ನು ಬಿಜೆಪಿ ಸರ್ಕಾರ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆಯನ್ನು ಉದ್ದೇಶಿಸಿ (ಎಐಎಂಎಸ್ಎಸ್)ನ ರಾಜ್ಯ ಉಪಾಧ್ಯಕ್ಷೆ ಎಂ ಎನ್ ಮಂಜುಳಾ ಮಾತನಾಡಿ, ಇಡೀ ದೇಶದಾದ್ಯಂತ ಮಹಿಳೆಯರು ನೂರಾರು ಶಾಹಿನ್ ಬಾಗ್‌ಗಳನ್ನು ರಚನೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಇದೊಂದು ಮಹಿಳಾ ವಿರೋಧಿ ಕಾನೂನುಗಳಾಗಿವೆ. ಇದನ್ನು ವಾಪಸ್ ತೆಗೆದುಕ್ಕೊಳ್ಳೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರ ಸರ್ಕಾರ ಭೇಟಿ ಪಡಾವೋ ಭೇಟಿ ಬಚಾವೋ ಅಂತಾ ಹೇಳಿದ್ರು. ಆದರೆ, ಭೇಟಿ ಬಚಾವೋ ಆಗುತ್ತಿಲ್ಲ. ಆದರೆ, ಮಹಿಳೆಯರನ್ನು ದೇಶ ಬಿಟ್ಟು ಹೋಗಿ ಎನ್ನುವ ಧೋರಣೆಯನ್ನು ಬಿಜೆಪಿ ಸರ್ಕಾರ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಎಸ್ಯುಸಿಐ ಕಮ್ಯೂನಿಸ್ಟ್ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಅತ್ಯಂತ ಜನ ವಿರೋಧಿ ನೀತಿಯಾಗಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್ಪಿಆರ್ನ ತರುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತ ಬೇಕಿದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲ ಧರ್ಮದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇದು ಒಂದು ಧರ್ಮಕ್ಕೆ ಸೀಮಿತವಾದ ದೇಶ ಅಲ್ಲ. ಇದು ಎಲ್ಲ ಧರ್ಮದವರ ದೇಶ ಎಂದರು.