ಬಳ್ಳಾರಿ:ರಾಘವ ಕಲಾ ಮಂದಿರ ಆಸ್ತಿ ತೆರಿಗೆ ಬಾಕಿ ವಸೂಲಾತಿ ಮಾಡದೇ ಮಹಾನಗರ ಪಾಲಿಕೆ ಉಪ ಆಯುಕ್ತ ಭೀಮಣ್ಣ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಖಂಡಿಸಿ ನವ ಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ನೇತೃತ್ವದಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿದರು.
ತೆರಿಗೆ ವಸೂಲಾತಿಯಲ್ಲಿ ವಿಳಂಬ ಏಕೆ? ಉಪ ಆಯುಕ್ತರ ವಿರುದ್ಧ ಗರಂ ಆದ ಸಿದ್ಮಲ್ ಮಂಜುನಾಥ ಬಳ್ಳಾರಿ ನಗರದಲ್ಲಿರುವ ರಾಘವ ಕಲಾ ಮಂದಿರ ಆಸ್ತಿ ತೆರಿಗೆಯನ್ನು ಪಾಲಿಕೆಯ ಉಪ ಆಯುಕ್ತ ( ಕಂದಾಯ ) ಭೀಮಣ್ಣ ಅವರು ಯಾವುದೇ ಕ್ರಮ ವಹಿಸಿರುವುದಿಲ್ಲ ಎಂದು ಆಯುಕ್ತೆ ತುಷಾರಮಣಿ ಅವರು ಜಿಲ್ಲಾಧಿಕಾರಿಗಳಿಗೆ 19 ನವೆಂಬರ್ 2019 ರಂದು ಪತ್ರ ಬರೆದಿದ್ದರು. ಸದರಿ ತೆರಿಗೆ ಬಾಕಿ ಇದ್ದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ಕಾಯ್ದೆ 1976 ನಿಯಮ 143 ರ ಪ್ರಕಾರ ಕ್ರಮ ವಹಿಸಲು ಕಾನೂನಿನಲ್ಲಿ ಅವಕಾಶವಿದ್ದರು ಕೂಡ ವಿನಾಕಾರಣ ವಿಳಂಬ ಮಾಡುತ್ತಿರುವುದರಿಂದ ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಆಯುಕ್ತೆ ತುಷಾರಮಣಿ ಅವರ ಆದೇಶ ಕಾಯದೆ ಜಿಲ್ಲಾಧಿಕಾರಿಗಳಿಗೆ ಆಸ್ತಿ ತೆರಿಗೆ ವಿಚಾರವಾಗಿ ಪತ್ರ ಬರೆದಿದ್ದೇನೆ ಅವರ ಆದೇಶ ಬಂದ ಕೂಡಲೇ ವಸೂಲಾತಿ ಇಲ್ಲ ವಿನಾಯಿತಿ ಮಾಡುತ್ತೇವೆ ಎಂದು ಭೀಮಣ್ಣ ಹೇಳಿದರು.