ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಢಣಾಪುರ ತುಂಗಭದ್ರಾ ಹಿನ್ನೀರಿನಲ್ಲಿ ಈಜು ಬಾರದೇ ಇಬ್ಬರು ಯುವಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ತುಂಗಭದ್ರಾ ಹಿನ್ನೀರಲ್ಲಿ ಈಜು ಬರದೇ ಯುವಕರಿಬ್ಬರು ನೀರುಪಾಲು - bellaricrimnews
ಮೊಹರಂ ಹಬ್ಬಕ್ಕೆಂದು ಬಂದಿದ್ದ ಇಬ್ಬರು ಯುವಕರು ಈಜು ಬಾರದೇ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ನಡೆದಿದೆ.
ಇಂದು ಮೊಹರಂ ಪ್ರಯುಕ್ತ ರಜೆ ಇದ್ದರಿಂದ ಊರಿಗೆ ಬಂದಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದ ಢಣಾಪುರದ ಬಸವರಾಜ (25) ಹಾಗೂ ಸಂಡೂರಿನ ಹರೀಶ (17) ಮೃತರು ಎಂದು ಗುರುತಿಸಲಾಗಿದೆ. ಹಿನ್ನೀರಿನ ಬಳಿ ಬಸವರಾಜ ಅವರ ಹೊಲವಿದೆ. ಹೊಲ ನೋಡಲು ಹೋದಾಗ ಈ ದುರಂತ ಸಂಭವಿಸಿದೆ. ಮೀನುಗಾರರ ತೆಪ್ಪದಲ್ಲಿ ಬಸವರಾಜ ಮತ್ತು ಹರೀಶ್ ಹಿನ್ನೀರಿನಲ್ಲಿ ಹೋಗಿದ್ದಾರೆ. ಗಾಳಿಗೆ ತೆಪ್ಪ ಬೇರೆ ಕಡೆ ಚಲಿಸಲು ಪ್ರಾರಂಭವಾಗಿದೆ. ಇದರಿಂದ ಭಯಭೀತರಾದ ಯುವಕರು ನೀರಿಗೆ ಹಾರಿದ್ದಾರೆ. ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಪಿ.ಎನ್.ಲೋಕೇಶ, ಕೂಡ್ಲಿಗಿ ಡಿವೈಎಸ್ಪಿ ಎಂ.ಸಿ.ಶಿವುಕುಮಾರ, ತಹಶೀಲ್ದಾರ ಹೆಚ್.ವಿಶ್ವನಾಥ, ಮರಿಯಮ್ಮಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವಕುಮಾರ ಭೇಟಿ ನೀಡಿ ಪರಿಶೀಲಿಸಿದರು.