ಕರ್ನಾಟಕ

karnataka

ETV Bharat / state

ಕರ್ನಾಟಕ-ಆಂಧ್ರದ ಗಡಿ ಭಾಗದ ಸಮಸ್ಯೆ 2018ರಲ್ಲೇ ಮುಗಿದಿದೆ: ಟಪಾಲ್ ಗಣೇಶ್​​ - Topal Ganesh talk about karnataka and andhra

ಕಳೆದ ಮೂರು ದಿನಗಳಿಂದ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್​​ಗಳು ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಿರೋದು ಹಾಸ್ಯಾಸ್ಪದ ಆಗಿದೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ಹೇಳಿದ್ದಾರೆ.

Tapal Ganesha
ಟಪಾಲ್ ಗಣೇಶ್​.

By

Published : Oct 19, 2020, 1:25 PM IST

ಬಳ್ಳಾರಿ:ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಭಾಗದ ಸಮಸ್ಯೆ 2018ರಲ್ಲೇ ಮುಗಿದಿದೆ. ಆದರೆ ಗಡಿ ಒತ್ತುವರಿ ಪ್ರಕರಣದ ಆರೋಪದ ಹಿನ್ನೆಲೆ ಕಾಂಕ್ರೀಟ್ ಪಿಲ್ಲರ್ ಫಿಕ್ಸ್ ಮಾಡಬೇಕಷ್ಟೇ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ಹೇಳಿದ್ದಾರೆ.

ಟಪಾಲ್ ಗಣೇಶ್​

ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018ರಲ್ಲೇ ಅಂತರ್​​ ರಾಜ್ಯ ಗಡಿ ಭಾಗದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆಯಾದ್ರೂ 1887ರ ನಕ್ಷೆ ಪ್ರಕಾರ ಸರ್ವೇ ಕಾರ್ಯ ಆಗಬೇಕು ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರ ಎರಡೂ ಒಪ್ಪಿಕೊಂಡಿವೆ ಎಂದರು.

ಹೀಗಾಗಿ, ಕಳೆದ ಮೂರು ದಿನಗಳಿಂದ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್​ಗಳು ಮತ್ತೊಮ್ಮೆ ಸರ್ವೇ ಕಾರ್ಯ ನಡೆಸಿರೋದು ಹಾಸ್ಯಾಸ್ಪದ ಆಗಿದೆ. ಎಲ್ಲೋ ಒಂದು ಕಡೆ ಈ ಸರ್ವೇ ಕಾರ್ಯಕ್ಕೆ ಆಗಮಿಸಿದ ಡೈರೆಕ್ಟರ್​​​ಗಳು ಟಿಎ, ಡಿಎ ಕ್ಲೈಮ್ ಮಾಡಲಿಕ್ಕೆ ಮಾತ್ರ ಬಂದಿದ್ದಾರೆಂದು ದೂರಿರುವ ಅವರು, ಅಂತರ್ ​ರಾಜ್ಯ ಗಡಿ ಸರ್ವೇ ಕಾರ್ಯ ಮುಕ್ತಾಯಗೊಳಿಸಿ ಕಾಂಕ್ರೀಟ್ ಪಿಲ್ಲರ್ ಫಿಕ್ಸ್ ಮಾಡುವುದಕ್ಕೆ ಏಕೆ ಡಿಲೇ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details