ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಮೊದಲ ಬಾರಿಗೆ ಕರಕುಶಲ ಮೇಳದ ತನೈರ ಪ್ರದರ್ಶನ - ಬಳ್ಳಾರಿ ಲೇಟೆಸ್ಟ್​ ನ್ಯೂಸ್

ದೇಶದ ವಿವಿಧೆಡೆಗಳ ಅತ್ಯುತ್ತಮ ದರ್ಜೆಯ ನೇಯ್ಗೆ ಸೀರೆಗಳು ಒಂದೇ ಸೂರಿನಡಿ ಲಭ್ಯವಿದ್ದು, ವಧುವಿನ ವಿಶೇಷ ಶ್ರೇಣಿಯ ತುಸ್ಸಾರ್, ಬನಾರಸ್, ಏಕತ್ ಮತ್ತು ಚಂದೇರಿ ಸೀರೆಗಳು, ಹಬ್ಬದ ವಿನ್ಯಾಸದ ಸೀರೆಗಳು, ಹೊಚ್ಚ ಹೊಸ ತಸ್ವಿಯ ವೈವಿಧ್ಯಮಯ ಶ್ರೇಣಿ ಇರುತ್ತದೆ..

ಬಳ್ಳಾರಿಯಲ್ಲಿ ಮೊದಲ ಬಾರಿಗೆ ಕರಕುಶಲ ಮೇಳದ ತನೈರ ಪ್ರದರ್ಶನ
Taneira exhibition will start on Feb. 21st in Bellary

By

Published : Feb 19, 2021, 1:11 PM IST

ಬಳ್ಳಾರಿ :ಟೈಟನ್‍ನ ಯುವ ಬ್ರಾಂಡ್‍ ಆಗಿರುವ ತನೈರ ವತಿಯಿಂದ ಮೊದಲ ಬಾರಿಗೆ ನಗರದಲ್ಲಿ ಕರಕುಶಲ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.

ನಗರದ ಕಾಳಮ್ಮ ಬೀದಿಯ ರಾಮೇಶ್ವರಿ ಹೋಟೆಲ್ ಪಕ್ಕದ ತನಿಷ್ಕ್ ಷೋರೂಂನಲ್ಲಿ ಫೆ.21ರಿಂದ 25ರವರೆಗೆ ಪ್ರದರ್ಶನ ನಡೆಯಲಿದೆ. ಬನಾರಸ್, ಚಂದೇರಿ, ಮಹೇಶ್ವರಿ, ಬಂಗಾಳ,‌ ಬಾಗಲ್ಪುರ, ಕಾಂಜೀವರಂ, ದಕ್ಷಿಣ ಭಾರತ ಮತ್ತು ಕೈಯಿಂದಲೇ ನೇಯ್ದಿರುವ ಭಾರತದ ಇತರ ಪ್ರದೇಶಗಳ ವೈವಿಧ್ಯಮಯ ಶ್ರೇಣಿಯ ಸೀರೆಗಳು ಪ್ರದರ್ಶನದಲ್ಲಿರಲಿವೆ.

ನಾಲ್ಕು ದಿನಗಳ ಪ್ರದರ್ಶನದಲ್ಲಿ ತನೈರ ವಧುವಿನ ಸೀರೆಗಳ ಸಂಗ್ರಹವಿದೆ. ಆಯ್ದ ಉತ್ಪನ್ನಗಳ ಮೇಲೆ ಶೇ.30ರವರೆಗೆ ರಿಯಾಯಿತಿ ಇರುತ್ತದೆ ಎಂದು ತನೈರ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರಾಜೇಶ್ವರಿ ಶ್ರೀನಿವಾಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ವಿವಿಧೆಡೆಗಳ ಅತ್ಯುತ್ತಮ ದರ್ಜೆಯ ನೇಯ್ಗೆ ಸೀರೆಗಳು ಒಂದೇ ಸೂರಿನಡಿ ಲಭ್ಯವಿದ್ದು, ವಧುವಿನ ವಿಶೇಷ ಶ್ರೇಣಿಯ ತುಸ್ಸಾರ್, ಬನಾರಸ್, ಏಕತ್ ಮತ್ತು ಚಂದೇರಿ ಸೀರೆಗಳು, ಹಬ್ಬದ ವಿನ್ಯಾಸದ ಸೀರೆಗಳು, ಹೊಚ್ಚ ಹೊಸ ತಸ್ವಿಯ ವೈವಿಧ್ಯಮಯ ಶ್ರೇಣಿ ಇರುತ್ತದೆ ಎಂದು ವಿವರಿಸಿದ್ದಾರೆ.

ABOUT THE AUTHOR

...view details