ಕರ್ನಾಟಕ

karnataka

ETV Bharat / state

ಸಿರುಗುಪ್ಪ ನಗರಸಭೆ-ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರದ್ದೇ ಕಾರುಬಾರು - ಬಳ್ಳಾರಿಯಲ್ಲಿ ಚುನಾವಣೆ

ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್​ವಾರು ಮೀಸಲಾತಿಯನ್ನು ವರ್ಗೀಕರಣ ಮಾಡಲಾಗಿತ್ತು.‌ ಈ ಹಿಂದೆ ಪುರುಷರು ಸ್ಪರ್ಧಿಸುತ್ತಿದ್ದ ಕೆಲ ವಾರ್ಡುಗಳಲ್ಲಿ ಅವರ ಪತ್ನಿಯರ ಕಾರುಬಾರು ಜೋರಾಗಿದೆ.

ಸ್ಥಳೀಯ ಚುನಾವಣೆ ,Election in Bellary
ಸ್ಥಳೀಯ ಚುನಾವಣೆ

By

Published : Feb 7, 2020, 6:00 PM IST

ಬಳ್ಳಾರಿ: ಫೆಬ್ರವರಿ 9 ರಂದು ನಡೆಯಲಿರುವ ಜಿಲ್ಲೆಯ ಸಿರುಗುಪ್ಪ ನಗರಸಭೆ ಹಾಗೂ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಎಲೆಕ್ಷನ್​ನಲ್ಲಿ ಮಹಿಳೆಯರ ಕಾರುಬಾರು ಜೋರಿದೆ. ಅದಕ್ಕೆ ಕಾರಣವೆಂದರೆ ವಾರ್ಡುವಾರು ಮೀಸಲಾತಿ.‌

ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್​ವಾರು ಮೀಸಲಾತಿಯನ್ನು ವರ್ಗೀಕರಣ ಮಾಡಲಾಗಿತ್ತು.‌ ಈ ಹಿಂದೆ ಪುರುಷರು ಸ್ಪರ್ಧಿಸುತ್ತಿದ್ದ ಕೆಲ ವಾರ್ಡುಗಳಲ್ಲಿ ಅವರ ಪತ್ನಿಯರ ಕಾರುಬಾರು ಈಗ ಜೋರಾಗಿದೆ. ಮಹಿಳಾ ಮೀಸಲಾತಿ ಬಂದಿದ್ದರಿಂದ ತಮ್ಮ ಪತ್ನಿಯರನ್ನೇ ಕಣಕ್ಕಿಳಿಸಿದ್ದಾರೆ.

ಕಾಂಗ್ರೆಸ್‌:
ಸತತ 5 ಬಾರಿ ಸದಸ್ಯರಾಗಿ, ಅಧ್ಯಕ್ಷರೂ ಆಗಿದ್ದ ಕಾಂಗ್ರೆಸ್‌ನ ಕೆ.ವೆಂಕಟರಾಮ ರೆಡ್ಡಿ ಈ ಬಾರಿ 24ನೇ ವಾರ್ಡ್‌ ನಿಂದ ಪತ್ನಿ ಸುಶೀಲಮ್ಮ ಅವರನ್ನು ಕಣಕ್ಕಿಳಿಸಿದ್ದಾರೆ. ಪಕ್ಷೇತರ ಸದಸ್ಯರಾಗಿದ್ದ ಮುಲ್ಲಾಬಾಬು ಈ ಬಾರಿ 1ನೇ ವಾರ್ಡ್‌ನಲ್ಲಿ ಪತ್ನಿ ಗುಲ್ಜಾರಾ ಬೇಗಂ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ.

ಮೊದಲ ಬಾರಿಗೆ ನಗರಸಭೆ ಅಧ್ಯಕ್ಷೆಯಾಗಿದ್ದ ಬಿ.ಪಾರಿಜಾತಮ್ಮ ಅವರ ಪತಿ ಬಿ.ಮುತ್ಯಾಲಶೆಟ್ಟಿ 21ನೇ ವಾರ್ಡ್‌ನಲ್ಲಿ ಕಣಕ್ಕಿಳಿದಿದ್ದಾರೆ.

ಬಿಜೆಪಿ:
ಎರಡು ಬಾರಿ ಸದಸ್ಯರಾಗಿದ್ದ ಮಹಾದೇವ ಅವರು ಈ ಬಾರಿ 17 ನೇ ವಾರ್ಡಿನಲ್ಲಿ ತಮ್ಮ ಪತ್ನಿ ಸುಜಾತ ದಳವಾಯಿ ಅವರನ್ನು ಕಣಕ್ಕಿಳಿಸಿದ್ದರೆ, ಎರಡು ಬಾರಿ ಸೋಲುಂಡಿದ್ದ ಎ.ಶಿವಪ್ಪನವ್ರು ತಮ್ಮ ಪತ್ನಿ ಎ.ಭಾರತಿ ಅವರನ್ನು 15ನೇ ವಾರ್ಡಿನಿಂದ ಕಣಕ್ಕಿಳಿಸಿದ್ದಾರೆ. ಕಳೆದ ಬಾರಿ ಸದಸ್ಯರಾಗಿದ್ದ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ 23 ನೇ ವಾರ್ಡ್‌ನಿಂದ ಪತ್ನಿ ಎಚ್.ಎಂ.ಪದ್ಮಲತಾ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ಸುಳುವಾಯಿ ಮಲ್ಲಿಕಾರ್ಜುನ 24 ನೇ ವಾರ್ಡ್‌ನಲ್ಲಿ ಪತ್ನಿ ಭಾರತಿಯವರನ್ನು ಕಣಕ್ಕಿಳಿಸಿದ್ದಾರೆ.

ABOUT THE AUTHOR

...view details