ಬಳ್ಳಾರಿ:ಲಾಕ್ಡೌನ್ ಆದೇಶ ಹಿನ್ನೆಲೆ ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿ ತಲುಪಿದ್ದಾರೆ. ಇದಲ್ಲದೆ ದಿನಗೂಲಿ ನೌಕರರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇನ್ನು ತಾಲೂಕಿನ ಜೋಳದರಾಶಿ ಗ್ರಾಮದಲ್ಲಿ ಯಾರೊಬ್ಬರೂ ಮನೆಯಿಂದ ಹೊರ ಬರದೆ, ಕೆಲಸಕ್ಕೂ ಹೋಗದ ಸ್ಥಿತಿ ಇದೆ. ಇದರಿಂದಾಗಿ ಬಡ ಕುಟುಂಬಗಳು ಆಹಾರದ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯೆ ತಿಮ್ಮಕ್ಕ ಇಂತಹ 300 ಕುಟುಂಬಗಳಿಗೆ ಉಚಿತವಾಗಿ ದಿನಸಿ ಕಿಟ್ ವಿತರಿಸಿದ್ದಾರೆ.
ಬಳ್ಳಾರಿಯ ಜೋಳದರಾಶಿ ಗ್ರಾಮದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ
ಲಾಕ್ಡೌನ್ನಿಂದಾಗಿ ಶ್ರಮಿಕ ವರ್ಗ ತೀವ್ರ ಸಂಕಷ್ಟ ಎದುರಿಸುತ್ತಿದೆ. ದಿನಗೂಲಿಯನ್ನೇ ನಂಬಿ ಬದುಕುತ್ತಿದ್ದ ಜನರು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದು, ಅವರನ್ನು ಚಿಂತೆಗೀಡುಮಾಡಿದೆ.
ಬಳ್ಳಾರಿಯ ಜೋಳದರಾಶಿಯಲ್ಲಿ ಕಡುಬಡವರಿಗೆ ರೇಷನ್ ಕಿಟ್ ವಿತರಣೆ
ಸದಸ್ಯೆ ತಿಮ್ಮಕ್ಕ ಮನೆ ಮನೆಗೆ ತರಳಿ ದಿನಸಿ ಕಿಟ್ ವಿತರಿಸಿದ್ದಾರೆ. ಈ ಕಿಟ್ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ರವೆ, 1 ಲೀಟರ್ ಎಣ್ಣೆ, 1 ಕೆಜಿ ಈರುಳ್ಳಿ , 1 ಕೆಜಿ ತೊಗರಿ ಬೇಳೆ, ಅರಿಶಿಣ, ಖಾರದ ಪುಡಿ, ಸಕ್ಕರೆ, ಉಪ್ಪು ವಿತರಣೆ ಮಾಡಿದ್ದಾರೆ.
ಈ ವೇಳೆ ಜೋಳದರಾಶಿ ಗ್ರಾಮ ಪಂಚಾಯತ್ ಸದಸ್ಯೆ ತಿಮ್ಮಕ್ಕ, ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಶರತ್ ಕುಮಾರ್, ಎಎಸ್ಐ ಉಮೇಶ್, ಸುರೇಶ್ ಹಾಜರಿದ್ದರು.