ಬಳ್ಳಾರಿ:ನಗರದ ಕೋವಿಡ್ ಕೇರ್ ಸೆಂಟರ್ನಲ್ಲಿ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಬಳ್ಳಾರಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ಕಳಪೆ ಆಹಾರ ಪೂರೈಕೆ ಆರೋಪ: ಸೋಂಕಿತರ ಆಕ್ರೋಶ
ಬಳ್ಳಾರಿ ನಗರದ ಬಿಸಿಎಂ ಹಾಸ್ಟೆಲ್ನಲ್ಲಿರುವ ಕೋವಿಡ್ ಸೋಂಕಿತರಿಗೆ ನಿನ್ನೆ ತಡರಾತ್ರಿ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡಲಾಗಿತ್ತು. ಹಳಸಿದ ಅನ್ನ ಹಾಗೂ ಜಗಿಯಲು ಬಾರದ ಚಪಾತಿ ನೀಡಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ.
ಈ ಕಳಪೆ ಆಹಾರ ಪೂರೈಕೆ ಮಾಡಿದವರ ವಿರುದ್ಧ ಕೋವಿಡ್ ಸೋಂಕಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ನಗರದ ಬಿಸಿಎಂ ಹಾಸ್ಟೆಲ್ನಲ್ಲಿರುವ ಕೋವಿಡ್ ಸೋಂಕಿತರಿಗೆ ನಿನ್ನೆ ತಡರಾತ್ರಿ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡಲಾಗಿತ್ತು. ಹಳಸಿದ ಅನ್ನ, ಜಗಿಯಲು ಬಾರದ ಚಪಾತಿ ನೀಡಿದ್ದಾರೆ. ಇಂತಹ ಕಳಪೆ ಆಹಾರ ಪೂರೈಕೆ ಮಾಡಿದವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋವಿಡ್ ಸೋಂಕಿತರು ಆಗ್ರಹಿಸಿದ್ದಾರೆ.
ನಾವ್ಯಾರೂ ಕೂಡ ಇಂತಹ ಕಳಪೆ ಆಹಾರವನ್ನ ಸೇವಿಸಿ ನಮ್ಮ ಆರೋಗ್ಯವನ್ನ ಹದಗೆಡಿಸಿಕೊಳ್ಳಲು ತಯಾರಿಲ್ಲ. ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಇದನ್ನ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋವಿಡ್ ಸೋಂಕಿತರು ಮನವಿ ಮಾಡಿದ್ದಾರೆ.