ಬಳ್ಳಾರಿ: ಪರಿಸರ ಅಭಿಯಂತರ ನೇತೃತ್ವದಲ್ಲಿ ನಗರದ ಜೈನ್ ಮಾರುಕಟ್ಟೆಯ ಸುತ್ತಮುತ್ತ ಅಂಗಡಿಗಳ ಮೇಲೆ ದಾಳಿ ಮಾಡಿ 150 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವುದರ ಜೊತೆಗೆ 10 ಸಾವಿರ ರೂ. ದಂಡವನ್ನು ಕೂಡ ಹಾಕಿದ್ದಾರೆ.
ಅಂಗಡಿಗಳ ಮೇಲೆ ದಾಳಿ 150 ಕೆ.ಜಿ ಪ್ಲಾಸ್ಟಿಕ್ ವಶ ಪರಿಸರ ಅಭಿಯಂತರರಾದ ಹರ್ಷವರ್ಧನ್ ಈಟಿವಿ ಭಾರತದೊಂದಿಗೆ ಮಾತನಾಡಿ, ಮಹಾನಗರ ಪಾಲಿಕೆಯ ಆಯುಕ್ತೆ ತುಷಾರಮಣಿ ಅವರ ಆದೇಶದ ಮೇರೆಗೆ ಬಳ್ಳಾರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನರಿಗೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಅದರಲ್ಲಿ ಕರಪತ್ರಗಳ ಹಂಚಿಕೆ ಸೇರಿದಂತೆ ಅನೇಕ ಪರಿಸರ ಜಾಗೃತಿ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಎಂದರು.
ಆರಂಭದಲ್ಲಿ ಪ್ಲಾಸ್ಟಿಕ್ ಬಳಿಸುವವರನ್ನು ಪ್ಲಾಸ್ಟಿಕ್ ಸೀಜ್ ಮಾಡ್ತಾ ಇದ್ದರು. ಹಾಗಾಗಿ ದಂಡ ಹಾಕುತ್ತಿರಲಿಲ್ಲ, ಆದರೆ ಈಗ ಆದೇಶ ಬಂದಿರುವುದರ ಅದರ ಪ್ರಕಾರ ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ಹಾಕಲಾಗುತ್ತಿದೆ ಎಂದರು. ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯನ್ನು ಮಾಡುವ ಕೈಗಾರಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗಿದೆ. ಬೇರೆ ರಾಜ್ಯಗಳಿಂದ ತರಿಸುವ ಕೆಲಸವನ್ನು ಇಲ್ಲಿಯ ಅಂಗಡಿಯ ಮಾಲೀಕರು ಮಾಡ್ತಾ ಇದ್ದಾರೆ ಎಂದು ಹೇಳಿದರು.
ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ, ಪರಿಸರ ಅಭಿಯಂತರರು ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ್ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಹದಗೊಳಿಸಿದರು.