ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಗಾಂಧೀಜಿ ಕುರಿತ ಛಾಯಾಚಿತ್ರ ಪ್ರದರ್ಶನ: ಗಮನ ಸೆಳೆದ ಬಾಪು ಪುತ್ಥಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಫೈಬರ್​ನಿಂದ ತಯಾರಿಸಲ್ಪಟ್ಟ ಮಹಾತ್ಮ ಗಾಂಧಿ ಪುತ್ಥಳಿಯನ್ನು ಕಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಳಕಿತಗೊಂಡರು. ಗಾಂಧೀಜಿ ಪುತ್ಥಳಿಯ ಜೊತೆ ಬಾಪು ಬಳಸುತ್ತಿದ್ದ ಚರಕವೂ ಪ್ರದರ್ಶನದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.

ಗಮನ ಸೆಳೆದ ಬಾಪುವಿನ ಪುತ್ಥಳಿ

By

Published : Nov 11, 2019, 1:53 PM IST

ಬಳ್ಳಾರಿ:‌ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯಕ್ತ ನಗರದ ಹೊಸ ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಕಂದು ಬಣ್ಣದ ಮಹಾತ್ಮ ಗಾಂಧಿ ಪುತ್ಥಳಿ ನೋಡುಗರ ಗಮನ‌ ಸೆಳೆಯಿತು.

ಗಮನ ಸೆಳೆದ ಬಾಪುವಿನ ಪುತ್ಥಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಫೈಬರ್​ನಿಂದ ತಯಾರಿಸಲ್ಪಟ್ಟ ಮಹಾತ್ಮಗಾಂಧಿ ಪುತ್ಥಳಿಯನ್ನು ಕಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಳಕಿತಗೊಂಡರು. ಗಾಂಧೀಜಿ ಪುತ್ಥಳಿಯ ಜೊತೆ ಬಾಪು ಬಳಸುತ್ತಿದ್ದ ಚರಕವೂ ಪ್ರದರ್ಶನದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ‌ನೀಡಿದರು. ಕೆಎಸ್ ಆರ್ ಟಿಸಿಯ ಡಿಸಿ ಕೆ. ಚಂದ್ರಶೇಖರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಶ್ರೀಧರನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜಪ್ಪ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಹಾತ್ಮ ಗಾಂಧೀಜಿಯವರ ಸಂದೇಶಗಳು, ಕರ್ನಾಟಕದ ವಿವಿಧೆಡೆ ಅವರು ಭೇಟಿ ನೀಡಿದ್ದ ಸ್ಥಳಗಳು ಹಾಗೂ ನಡೆಸಿದ ಹೋರಾಟಗಳ ಬಗ್ಗೆ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details