ಕರ್ನಾಟಕ

karnataka

ETV Bharat / state

ಹುತ್ತಕ್ಕೆ ಕೋಳಿಯ ಬಿಸಿರಕ್ತ ಅರ್ಪಣೆ.. ಈ ನಾಗರಪಂಚಮಿ ಆಚರಣೆ ಹಿಂದಿದೆ ವಿಚಿತ್ರ ನಂಬಿಕೆ

ಕೂಡ್ಲಿಗಿ ತಾಲೂಕಿನ ಬತ್ತನಹಳ್ಳಿಯಲ್ಲಿ ಭಾನುವಾರ ಕೊರಚ ಮತ್ತು ಕೊರಮ ಸಮುದಾಯದವರು ನಾಗರ ಪಂಚಮಿಯನ್ನು ಕೋಳಿ ಬಿಸಿರಕ್ತವನ್ನು ಹುತ್ತಕ್ಕೆ ಬಿಡುವ ಮೂಲಕ ಆಚರಿಸಿದ್ದಾರೆ.

ಹುತ್ತಕ್ಕೆ ಕೋಳಿಯ ಬಿಸಿರಕ್ತ ಅರ್ಪಣೆ
ಹುತ್ತಕ್ಕೆ ಕೋಳಿಯ ಬಿಸಿರಕ್ತ ಅರ್ಪಣೆ

By

Published : Aug 8, 2022, 7:47 PM IST

ವಿಜಯನಗರ: ನಾಗರಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವುದು ವಾಡಿಕೆ. ಆದರೆ, ಈ ಗ್ರಾಮದಲ್ಲಿ ಹುತ್ತಕ್ಕೆ ಕೋಳಿಯ ಬಿಸಿರಕ್ತ ಬಿಡುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಕೂಡ್ಲಿಗಿ ತಾಲೂಕಿನ ಬತ್ತನಹಳ್ಳಿಯಲ್ಲಿ ಭಾನುವಾರ ಕೊರಚ ಮತ್ತು ಕೊರಮ ಸಮುದಾಯದವರು ನಾಗರ ಪಂಚಮಿಯನ್ನು ಈ ರೀತಿ ಆಚರಿಸಿದ್ದಾರೆ. ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡೋ ವಿಶೇಷ ಆಚರಣೆಯನ್ನು ಇಲ್ಲಿಯ ಒಂದು ಸಮುದಾಯ ಮಾಡಿಕೊಂಡು ಬಂದಿದೆ.

ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ ದಿನದಂದು ಸಾಮಾನ್ಯವಾಗಿ ಎಲ್ಲರಂತೆ ಪೂಜೆ ಮಾಡ್ತಾರೆ. ಆದರೆ, ಶ್ರಾವಣ ಮಾಸದ ಎರಡನೇ ಭಾನುವಾರ ಮಾತ್ರ ಈ ರೀತಿಯ ಕೋಳಿಯ ಕತ್ತನ್ನು ಕೊಯ್ದು ರಕ್ತವನ್ನು ಹುತ್ತದ ಮೇಲೆ ಹಾಕುವ ಪದ್ಧತಿಯನ್ನು ಹಲವು ತಲೆಮಾರುಗಳಿಂದ ನಡೆಸುತ್ತಾ ಬಂದಿದ್ದಾರೆ.

ನಾಗರಪಂಚಮಿ ಆಚರಣೆಗೆ ಸಿದ್ಧರಾಗಿರುವುದು

ಈ ಆಚರಣೆ ಮಾಡೋದಕ್ಕೂ‌ ಕಾರಣವೂ ಇದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಜನರು ಹಿಂದೆ ಅಡವಿಯಲ್ಲಿ ವಾಸ ಮಾಡ್ತಿದ್ರು. ಈಚಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿದಂತೆ ಮತ್ತಿತರ ವಸ್ತುಗಳನ್ನು ತಯಾರಿಸಿ ಅದನ್ನು ಊರುಗಳಿಗೆ ತಂದು ಮಾರಾಟ ಮಾಡ್ತಿದ್ರು. ಅಡವಿಯಲ್ಲಿ ಇರುವಾಗ ಈ ಬುಡಕಟ್ಟು ಜನರಿಗೆ ಹಾವುಗಳು ಹೆಚ್ಚಾಗಿ ಕಚ್ಚಿ ಜನರು ಸಾವನ್ನಪ್ಪುತ್ತಿದ್ದರಂತೆ.

ಹಿರಿಯರ ಸಲಹೆ ಮೇರೆಗೆ ಆಚರಣೆ ಚಾಲ್ತಿ:ಈ ಬಗ್ಗೆ ಸಮುದಾಯದ ಹಿರಿಯರ ಜೊತೆಗೆ ಚರ್ಚಿಸಿದಾಗ ನಾಗರ ಪಂಚಮಿ ‌ಮುಗಿದ ಬಳಿಕ ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಕೋಳಿಯ ರಕ್ತದಿಂದ ಅಭಿಷೇಕ ಮಾಡಿದಾಗ ತೃಪ್ತನಾಗೋ ನಾಗದೇವರು ನಿಮ್ಮ ಸಮುದಾಯಕ್ಕೆ ಯಾವುದೇ ತೊಂದರೆ ಮಾಡೋದಿಲ್ಲ ಎಂದು ಹೇಳಿದ್ರಂತೆ. ಹಿರಿಯರ ಸಲಹೆ ಮೇರೆಗೆ ಆ ಆಚರಣೆ ಚಾಲ್ತಿಯಲ್ಲಿ ಬಂದಿದೆಯಂತೆ. ವಿಶೇಷವೆಂದ್ರೆ ಈ ರೀತಿ ಆಚರಣೆ ಮಾಡಲು ಪ್ರಾರಂಭಿಸಿದಾಗಿನಿಂದ ಹಾವು ಕಚ್ಚೋದು ಕಡಿಮೆಯಾಗಿದೆ ಅಂತಾರೆ ಗ್ರಾಮಸ್ಥರು. ಹೀಗಾಗಿ, ಅಂದಿನಿಂದ ಇಂದಿನವರೆಗೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಓದಿ:ಭ್ರಷ್ಟ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು : ಡಿ ಕೆ ಶಿವಕುಮಾರ್ ಕಿಡಿ

ABOUT THE AUTHOR

...view details