ಕರ್ನಾಟಕ

karnataka

ETV Bharat / state

ಹೊಸಪೇಟೆ ನಗರಸಭೆಯ ಬಹುತೇಕ ಹುದ್ದೆಗಳು ಖಾಲಿ: ಕಾರ್ಯಕ್ಷಮತೆಗೆ ಪೆಟ್ಟು

ಹೊಸಪೇಟೆ ನಗರಸಭೆಗೆ ಒಟ್ಟು 540 ಹುದ್ದೆಗಳು‌ ಮಂಜೂರಾಗಿವೆ. ಈ ಪೈಕಿ 188 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಉಳಿದ 352 ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ.

Hospet Municipality are vacant
ಹೊಸಪೇಟೆ ನಗರಸಭೆ

By

Published : Oct 5, 2020, 8:41 PM IST

ಹೊಸಪೇಟೆ: ನಗರಸಭೆಯಲ್ಲಿನ‌ ಹುದ್ದೆಗಳು ಬಹುತೇಕವಾಗಿ ಖಾಲಿ ಇದ್ದು, ಸಾರ್ವಜನಿಕ ಕೆಲಸಕ್ಕೆ ಹಿನ್ನಡೆಯಾಗುತ್ತಿದೆ.‌ ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆ ಏರುಗತಿಯಲ್ಲಿದೆ. ಆದರೆ, ಸಾರ್ವಜನಿಕರಿಗೆ ತಕ್ಕಂತೆ ಅಧಿಕಾರಿಗಳು ಇಲ್ಲದಿರುವುದು ಕಾರ್ಯಕ್ಷಮತೆಗೆ ಪೆಟ್ಟು ಬಿದ್ದಿದೆ.

2004 ಮತ್ತು ತಿದ್ದುಪಡಿ 2011‌ನೇ ಸಿ ಅಂಡ್ ಆರ್ ನಿಯಮದ ಪ್ರಕಾರ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ಆದರೆ, ನಿಯಮ ಪ್ರಕಾರ ಹುದ್ದೆಗಳನ್ನು ನಿಯೋಜನೆ ಮಾಡಿಲ್ಲ.‌ ಇರುವಂತಹ ಸಿಬ್ಬಂದಿ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುವ ಸ್ಥಿತಿ ಬಂದಿದ್ದು,‌ ಎ,ಬಿ,ಸಿ, ಡಿ ದರ್ಜೆ ಹುದ್ದೆಗಳು ಬಹುತೇಕ‌‌ ಖಾಲಿ ಇವೆ.

ನಗರಸಭೆಯ ಪೌರಾಯುಕ್ತೆ ಜಯಲಕ್ಷ್ಮಿ

ನಗರಸಭೆಯ ವ್ಯಾಪ್ತಿಯಲ್ಲಿ 35 ವಾರ್ಡ್​​ಗಳು ಬರುತ್ತವೆ.‌ ಅಂದಾಜು 2.70 ಲಕ್ಷ ಜನರು ವಾಸಿಸುತ್ತಿದ್ದಾರೆ. ಇಷ್ಟು ಜನಸಂಖ್ಯೆಗೆ ನಿಗದಿತ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಾದರೆ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಗ ಆಡಳಿತಾಂಗ ಮತ್ತಷ್ಟು ತ್ವರಿತಗತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಬಹುದು.

ಮಂಜೂರಾದ ಹುದ್ದೆಗಳೆಷ್ಟು?: ನಗರಸಭೆಗೆ ಒಟ್ಟು 540 ಹುದ್ದೆಗಳು‌ ಮಂಜೂರಾಗಿವೆ. ಈ ಪೈಕಿ 188 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಉಳಿದ 352 ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಗುತ್ತಿಗೆ ನೌಕರರೇ ಆಧಾರ: ಸಿನೀಯರ್ ಪ್ರೋಗ್ರಾಮರ್-01, ಕಂಪ್ಯೂಟರ್ ಅಪರೇಟರ್ ಅಥವಾ ಡಾಟಾ ಎಂಟ್ರಿ ಅಪರೇಟರ್-04, ಹೆಲ್ಪರ್ ನೀರು ಸರಬರಾಜಿನ‌ ವಾಲ್ವಮ್ಯಾನ್-24 ಜನರು ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌ ಖಾಲಿ ಇರುವ ಹುದ್ದೆಗಳಲ್ಲಿ ಗುತ್ತಿಗೆ ನೌಕರರನ್ನು ನೇಮಕ ಮಾಡಲಾಗಿದೆ. ಇನ್ನುಳಿದ ನೇರಪಾವತಿ ವಾಹನ ಚಾಲಕರು-10, ಪೌರಕಾರ್ಮಿಕರು-98, ಲೋಡರ್ಸ್- 22, ಕ್ಲೀನರ್ಸ್-06 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.

ಭರ್ತಿಯಾಗಬೇಕಾದ ಹುದ್ದೆಗಳು: ಸಂಘಟನಾ ವ್ಯವಹಾರ ಅಧಿಕಾರಿ -01, ಹಿರಿಯ ಆರೋಗ್ಯ ನಿರೀಕ್ಷಕರು -02, ಪ್ರಥಮ ದರ್ಜೆಯ ಸಹಾಯಕ-01, ಶೀಘ್ರಲಿಪಿಗಾರರು-02, ನೀರು ಸರಬರಾಜು ನಿಯಂತ್ರಕರು - 08, ಕಿರಿಯ ಆರೋಗ್ಯ ನಿರೀಕ್ಷಕರು -02, ಸಮುದಾಯ ಸಂಘಟಕರು-02, ದ್ವಿತೀಯ ದರ್ಜೆಯ ಸಹಾಯಕರು-01, ಕರ ವಸೂಲಿಕಾರರು-08, ಅಸಿಸ್ಟೆಂಟ್ ವಾಟರ್ ಸಪ್ಲೈ ಆಪರೇಟರ್-08, ಲ್ಯಾಬ್ ಟೆಕ್ನಿಷಿಯನ್-01, ಪಂಬ್ಲರ್-1, ಸ್ಯಾನಿಟರಿ ಸೂಪರ್ ವೈಸರ್-07, ಹೆಡ್ ಗಾರ್ನರ್- 01, ಸೀನಿಯರ್ ವಾಲ್​ಮ್ಯಾನ್-01, ಪೌರಕಾರ್ಮಿಕರ-234, ಗಾರ್ಡನರ್ಸ್-05 ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ.‌

ನಗರಸಭೆಯ ಪೌರಾಯುಕ್ತೆ ಜಯಲಕ್ಷ್ಮಿ ಅವರು ಮಾತನಾಡಿ, ಹುದ್ದೆಗಳು‌‌‌‌ ಖಾಲಿ ಇರುವುದರಿಂದ ಜನರಿಗೆ ಸೇವೆ ಮಾಡಲು ತೊಂದರೆ ಆಗುತ್ತಿದೆ. ಸುಮಾರು ಹುದ್ದೆಗಳು ಖಾಲಿ ಉಳಿದಿದ್ದು, ಈಗಾಗಲೇ ಮೇಲಧಿಕಾರಿಗಳ‌ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ABOUT THE AUTHOR

...view details