ಕರ್ನಾಟಕ

karnataka

By

Published : Apr 13, 2020, 6:36 PM IST

ETV Bharat / state

ಗಣಿಜಿಲ್ಲೆ ಸುರಕ್ಷಿತ ತಾಣವಾಗಿಸುವ ಇಂಗಿತ ವ್ಯಕ್ತಪಡಿಸಿದ ಸಚಿವ ಆನಂದಸಿಂಗ್​​​

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ - 19ಗೆ ಸಂಬಂಧಿಸಿದ ಸಭೆ ನಡೆಯಿತು. ಬಳಿಕ ಮಾತನಾಡಿದ ಸಚಿವ ಆನಂದ್​ಸಿಂಗ್​​​ ಗಣಿ ಜಿಲ್ಲೆಯ 80 ಮಂದಿಯ ಪೈಕಿ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಾಸಿಟಿವ್ ಬಂದಿದೆ. ಉಳಿದವರಿಗೆ ನೆಗೆಟಿವ್ ಬಂದಿದೆ ಎಂದರು.

ಸಚಿವ ಆನಂದಸಿಂಗ್​​​
ಸಚಿವ ಆನಂದಸಿಂಗ್​​​

ಬಳ್ಳಾರಿ:ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಗಣಿ ಜಿಲ್ಲೆಯ 80 ಮಂದಿಯ ಪೈಕಿ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಾಸಿಟಿವ್ ಬಂದಿದೆ. ಉಳಿದವರಿಗೆ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ - 19 ಗೆ ಸಂಬಂಧಿಸಿದ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಅಂದಾಜು 112 ಮಂದಿ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಪೈಕಿ 32 ಹೊರ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಕೊರೊನಾ ಸೋಂಕಿನ‌ ಗುಣಲಕ್ಷಣಗಳಿಲ್ಲ.

ಜಿಲ್ಲೆಯಲ್ಲಿ ಉಳಿದಿದ್ದ 80 ಮಂದಿಯ ಪೈಕಿ ಗುಗ್ಗರಹಟ್ಟಿ ನಿವಾಸಿಯೊಬ್ಬರಲ್ಲಿ ಮಾತ್ರ ಈ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಉಳಿದ 79 ಮಂದಿಯಲ್ಲಿ ಕೊರೊನಾ ಸೋಂಕು ಸುಳಿದಿಲ್ಲ. ಅವರೆಲ್ಲರನ್ನೂ ಕೂಡ ಏಪ್ರಿಲ್ 14 ರಂದು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಅದರ ರಿಸಲ್ಟ್ 16 ಅಥವಾ 17 ರೊಳಗೆ ಬರಬಹುದು. ಅವೆಲ್ಲವೂ ಕೂಡ ಶೇಕಡ 80ರಷ್ಟು ನೆಗೆಟಿವ್ ರಿಸ್ಟಲ್ ಬರಬಹುದೆಂಬ ಆತ್ಮವಿಶ್ವಾಸ ನನ್ನಲ್ಲಿದೆ.‌ ನೆಗೆಟಿವ್ ಬಂದಿದ್ದೇ ಆದ್ರೆ, ನಮ್ಮ ಜಿಲ್ಲೆಯು ಸುರಕ್ಷಿತ ಝೋನ್​ಗೆ ತಲುಪುವ ಸಾಧ್ಯತೆ ಇದೆ ಎಂಬ ಇಂಗಿತ ಮತ್ತು ಆಶಯವನ್ನ ವ್ಯಕ್ತಪಡಿಸಿದ್ದಾರೆ.

ಅಂತರ್​​​ರಾಜ್ಯ ಗಡಿಗಳಲ್ಲಿ ಕಟ್ಟೇಚ್ಚರವಹಿಸಿ:

ಜಿಲ್ಲಾ ಪೊಲೀಸ್ ಇಲಾಖೆಯು ಅಂತರ್​​​ರಾಜ್ಯ ಗಡಿಭಾಗಗಳಲ್ಲಿ ತೀವ್ರ ಕಟ್ಟೇಚ್ಚರ ವಹಿಸಬೇಕು. ಗಡಿಯಂಚಿನಲ್ಲಿ ಲಾಕ್​​ಡೌನ್ ಎಂಬ ನಾಮಫಲಕ ಅಂಟಿಸಬೇಕು. ನೆರೆಹೊರೆಯ ರಾಜ್ಯಗಳಿಂದ ಬರುವ ಯಾವುದೇ ಲಘು ಮತ್ತು ಭಾರೀ ವಾಹನಗಳ ಸಂಚಾರವನ್ನ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಚಿವ ಆನಂದಸಿಂಗ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರಿಗೆ ಸೂಚನೆ ನೀಡಿದ್ರು.

ABOUT THE AUTHOR

...view details