ಕರ್ನಾಟಕ

karnataka

By

Published : Jun 6, 2021, 8:42 AM IST

ETV Bharat / state

ಬಳ್ಳಾರಿ, ವಿಜಯನಗರದಲ್ಲಿ ಸಂಪೂರ್ಣ ‌ಲಾಕ್​ಡೌನ್ ಜೂ.14ರವರೆಗೆ ಮುಂದುವರಿಕೆ

ಸಾರ್ವಜನಿಕರ ಸುರಕ್ಷತಾ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಜೂ.14ರವರೆಗೆ ಲಾಕ್​ಡೌನ್​ ಮುಂದುವರಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

bank
bank

ಬಳ್ಳಾರಿ:ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಂತ ಜಿಲ್ಲಾಡಳಿತ ಈಗಾಗಲೇ ವಿಧಿಸಲಾಗಿರುವ ನಿರ್ಬಂಧಗಳನ್ನು ಸಾರ್ವಜನಿಕರ ಸುರಕ್ಷತಾ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಜೂ.14ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ‌ಪವನ ಕುಮಾರ ಮಾಲಪಾಟಿ ಆದೇಶ ಮಾಡಿದ್ದಾರೆ.

ಜೂ.7ರ ಬೆಳಗ್ಗೆ 6ರಿಂದ ಜೂ.14ರ ಬೆಳಗ್ಗೆ 6 ಗಂಟೆಯವರೆಗೆ ಯಥಾಸ್ಥಿತಿಯಾಗಿ ಮುಂದುವರಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಜೂ.7ಮತ್ತು 8ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ (ಕಂಟೈನ್‌ಮೆಂಟ್ ಪ್ರದೇಶದ ಹೊರಗಡೆ ಮಾತ್ರ) ಅವಕಾಶ ನೀಡಲಾಗಿದೆ. ಸಾರ್ವಜನಿಕರು ಪಡಿತರವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ನೇರವಾಗಿ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್​ಗಳು ಸೇರಿದಂತೆ ಮೈಕ್ರೋ ಫೈನಾನ್ಸ್‌ (Microfinance Institutions), ಇನ್ಶೂರೆನ್ಸ್‌ ಕಛೇರಿಗಳು (Insurance Offices), ಕೋಆಪರೇಟಿವ್ (Co-operative) ಬ್ಯಾಂಕ್​ಗಳಿಗೆ ಜೂ.7ರಿಂದ ಜೂ.11ರವರೆಗೆ ಪ್ರತಿದಿನ ಬೆಳಗ್ಗೆ10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದಿದ್ದಾರೆ.

ಸಾರ್ವಜನಿಕರಿಗೆ ನಗದು ಲಭ್ಯವಾಗುವಂತೆ ನೋಡಿಕೊಳ್ಳಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾದ್ಯಂತ ಎಲ್ಲಾ ಎಟಿಎಂಗಳನ್ನು 24x7 ಮುಕ್ತವಾಗಿರಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ ಹಾಗೂ ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಅನಕೂಲವಾಗುವಂತೆ (Regular Cash Loading) ಮಾಡಲು ಸೂಚಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:COVIDನಿಂದ ಜಾಗೃತರಾಗಿರುವಂತೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಪತ್ರ ಬರೆದು ಹೃದಯಗೆದ್ದ ಟೀಚರ್'​ಅಮ್ಮ'

ABOUT THE AUTHOR

...view details