ಕರ್ನಾಟಕ

karnataka

ETV Bharat / state

ವಿಜಯನಗರ: ರೇಷ್ಮೆಗೂಡಿನಲ್ಲಿ ಚಿರತೆ ಸೆರೆ - ವಿಜಯನಗರದಲ್ಲಿ ಚಿರತೆ ಸೆರೆ

ಚಿರತೆ ಸೆರೆಗಾಗಿ ಹೊಸ ಉಪಾಯ ಮಾಡಿದ್ದ ರೈತರು ಸತ್ತ ಹಸುವಿವ ಮೌಂಸವನ್ನು ತಂದು ರೇಷ್ಮೆ ಮನೆಯಲ್ಲಿ ಹಾಕಿದ್ದಾರೆ. ಮಾಂಸ ವಾಸನೆಯಿಂದ ಬಂದ ಚಿರತೆ ರೇಷ್ಮೆ ಮನೆಯಲ್ಲಿ ಸೆರೆಯಾಗಿದೆ.‌

ಚಿರತೆ ಸೆರೆ
ಚಿರತೆ ಸೆರೆ

By

Published : Aug 3, 2021, 10:41 AM IST

ಹೊಸಪೇಟೆ (ವಿಜಯನಗರ): ಚಿರತೆಯೊಂದು ರೇಷ್ಮೆಗೂಡಿನ ಮನೆಯಲ್ಲಿ ಸೆರೆಯಾದ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಕ್ಕಮಜ್ಜಿಗೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.

ಚಿರತೆ ಸೆರೆ

ಮಜ್ಜಿಗೇರಿ ಗ್ರಾಮದ ಪೂಜಾರ ಬಸಪ್ಪ ಎಂಬುವವರ ರೇಷ್ಮೆಗೂಡಿನಲ್ಲಿ ಚಿರತೆ ಬಂಧಿಯಾಗಿದೆ. ಮೂರು ದಿನಗಳ ಹಿಂದೆ ರೇಷ್ಮೆ ಸಾಕಾಣಿಕೆ ಮನೆಯ ಹೊರಗೆ ಕಟ್ಟಿ ಹಾಕಲಾಗಿದ್ದ ಹಸು ಕಾಣೆಯಾಗಿತ್ತು. ಸುತ್ತಮುತ್ತ ಪರಿಶೀಲಿಸಿದಾಗ ಹಸು ಮೇಲೆ ಚಿರತೆ ದಾಳಿ ಮಾಡಿರುವುದು ತಿಳಿದಿತ್ತು.‌

ಚಿರತೆ ಸೆರೆಗಾಗಿ ಹೊಸ ಉಪಾಯ ಮಾಡಿದ್ದ ರೈತರು ಸತ್ತ ಹಸುವಿವ ಮೌಂಸವನ್ನು ತಂದು ರೇಷ್ಮೆ ಮನೆಯಲ್ಲಿ ಹಾಕಿದ್ದಾರೆ. ಮಾಂಸ ವಾಸನೆಯಿಂದ ಬಂದ ಚಿರತೆ ರೇಷ್ಮೆ ಮನೆಯಲ್ಲಿ ಸೆರೆಯಾಗಿದೆ.‌ ಬಳಿಕ ಜಮೀನಿನ ಮಾಲಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಅಧಿಕಾರಿ ಭರತ್ ತಳವಾರ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗಳ ಮೂಲಕ ಚಿರತೆಯನ್ನು ಹಿಡಿದು, ಸುರಕ್ಷತಾ ಸ್ಥಳಕ್ಕೆ ಸಾಗಿಸಿದ್ದಾರೆ.

ಓದಿ: ಗೋಮಾಳ ರಕ್ಷಿಸುವಂತೆ ಫೇಸ್​​ಬುಕ್​​ನಲ್ಲಿ ಯುವಕನ ಮನವಿ: ಜಿಲ್ಲಾಧಿಕಾರಿಯಿಂದ ಸ್ಪಂದನೆ

ABOUT THE AUTHOR

...view details