ಬಳ್ಳಾರಿ :ನಗರದ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಲಿನ ಗೋಡೆಗಳು ನಜ್ಜುಗುಜ್ಜಾಗಿವೆ.
ನಿಯಂತ್ರಣ ತಪ್ಪಿ ಸಿನಿಮೀಯ ರೀತಿ ಗುಡಿಸಲಿನೊಳಗೇ ನುಗ್ಗಿದ ಲಾರಿ.. - ಲಾರಿ
ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಿನ ಗೋಡೆಗಳು ನಜ್ಜು ಗುಜ್ಜಾಗಿವೆ.
ನಿಯಂತ್ರಣ ತಪ್ಪಿ
ನಿನ್ನೆಯ ಮಧ್ಯಾಹ್ನ ಬಳ್ಳಾರಿಯಿಂದ ಲಕ್ಷ್ಮೀನಗರ ಕ್ಯಾಂಪಿನ ಮಾರ್ಗವಾಗಿ ಸಂಚರಿಸುತ್ತಿದ್ದ ಈ ಲಾರಿಯು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಏಕಾಏಕಿ ಗುಡಿಸಲಿ ನೊಳಗೆ ನುಗ್ಗಿದೆ.
ಅದೃಷ್ಟವಶಾತ್ ಗುಡಿಸಲಿನಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲಿನಲ್ಲಿದ್ದ ಕುಟುಂಬ ಸದಸ್ಯರು ಕೆಲಸಕ್ಕೆಂದು ಹೋದಾಗ ಈ ಘಟನೆ ನಡೆದಿದೆ.
Last Updated : May 14, 2019, 12:52 PM IST