ಬಳ್ಳಾರಿ: ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆ ಅಡಿಯಲ್ಲಿ ಜಿಲ್ಲೆಯ 356 ಸರ್ಕಾರಿ ಶಾಲೆಗಳ ಅಂಗಳದಲ್ಲಿ ಕಿಚನ್ ಗಾರ್ಡನ್ ಮಾಡಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ನಿರ್ಧರಿಸಿದೆ ಎಂದು ಡಿಡಿಪಿಐ ಸಿ. ರಾಮಪ್ಪ ತಿಳಿಸಿದ್ದಾರೆ.
ಬಳ್ಳಾರಿ ಸರ್ಕಾರಿ ಶಾಲೆಗಳ ಅಂಗಳದಲ್ಲೇ ಸಿಗಲಿವೆ ತಾಜಾ ಸೊಪ್ಪು, ತರಕಾರಿ... ಬಿಸಿಯೂಟಕ್ಕೆ ಸಹಕಾರಿ!
356 ಸರ್ಕಾರಿ ಶಾಲೆಗಳ ಅಂಗಳದಲಿ ಕಿಚನ್ ಗಾರ್ಡನ್ ಮಾಡಲಾಗುವುದು ಎಂದು ಡಿಡಿಪಿಐ ಸಿ. ರಾಮಪ್ಪ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಡಿಡಿಪಿಐ ಸಿ. ರಾಮಪ್ಪ, ಕಲಬುರಗಿ ಪ್ರಾದೇಶಿಕ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯಡಿ ಕಿಚನ್ ಗಾರ್ಡನ್ ಸ್ಥಾಪಿಸುವ ಆಲೋಚನೆಯನ್ನ ಮಾಡಲಾಗಿದ್ದು, ಕರಿಬೇವು, ನುಗ್ಗೆಸೊಪ್ಪು ಸೇರಿದಂತೆ ಇನ್ನಿತರೆ ತರಕಾರಿ ಹಾಗೂ ಸೊಪ್ಪುಗಳನ್ನ ಬೆಳೆಯಲಾಗುತ್ತೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರೊಂದಿಗೆ ಈ ಕುರಿತು ಸುದೀಘ್ರವಾಗಿ ಚರ್ಚಿಸಿ, ಕೂಡಲೇ ಆಯಾ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡಲಾಗುವುದು. ಅಲ್ಲದೇ, ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಈ ಕಿಚನ್ ಗಾರ್ಡನ್ ನಿರ್ಮಾಣ ಮಾಡಲಾಗುತ್ತಿದ್ದು, ಅದರ ನಿರ್ವಹಣೆ ಜವಾಬ್ದಾರಿಯನ್ನ ಶಾಲೆಯ ಶಿಕ್ಷಕರಿಗೆ ವಹಿಸಲಾಗುತ್ತೆ ಎಂದು ಹೇಳಿದರು.