ಹೊಸಪೇಟೆ (ವಿಜಯನಗರ):ಒಂದು ತಾಸು ರಭಸವಾಗಿ ಸುರಿದ ಮಳೆಯಿಂದ ಕೆಇಬಿ ನೌಕರರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಘಟನೆ ಹೂವಿನ ಹಡಗಲಿಯ ಕೆಇಬಿ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ.
ಹೂವಿನ ಹಡಗಲಿಯಲ್ಲಿ ಒಂದು ತಾಸು ಸುರಿದ ಮಳೆಗೆ ಕೆಇಬಿ ನೌಕರರು ತತ್ತರ - hospete latest rain related News
ಹೊಸಪೇಟೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಇಬಿ ನೌಕರರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಹೊರಗಡೆ ಹಾಕುವ ಕಾರ್ಯ ನಡೆಸಿದರು.
ಮಳೆಗೆ ತತ್ತರಿಸಿದ ಕೆಇಬಿ ನೌಕರರು
ಮಳೆನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಮನೆಯಿಂದ ಹೊರಗಡೆ ಕುಳಿತು ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಕ್ಕಳು, ವೃದ್ಧರು ರಾತ್ರಿಯೆಲ್ಲಾ ಪರದಾಡಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಹೊರಗಡೆ ಹಾಕುವ ಕಾರ್ಯ ನಡೆಸಿದರು.