ಕರ್ನಾಟಕ

karnataka

ETV Bharat / state

ನಾನು ಹೇಳಿದಂತೆ ಆಗಿದ್ದು ನಿಜ, ಆದರಿದು ಆಪರೇಷನ್​​ ಕಮಲ ಅಲ್ಲ: ಈಶ್ವರಪ್ಪ

ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ರಾಷ್ಟ್ರೀಯ ಮುಖಂಡರು ನಿರ್ಣಯ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಶಾಸಕರು ರಾಜೀನಾಮೆ ಏಕೆ ಕೊಟ್ಟರು ಎಂಬುದನ್ನು ರಾಜೀನಾಮೆ ಕೊಟ್ಟವರನ್ನೇ ಕೇಳಬೇಕು. ಇದು ಆಪರೇಷನ್ ಕಮಲ ಅಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಕೆ.ಎಸ್​.ಈಶ್ವರಪ್ಪ

By

Published : Jul 6, 2019, 9:17 PM IST

ಬಳ್ಳಾರಿ: ಆಪರೇಷನ್ ಕಮಲ ಬಳ್ಳಾರಿಯಿಂದಲೇ ಆರಂಭವಾಗಬಹುದು ಎಂದು ನೀಡಿದ್ದು ಹೇಳಿಕೆಯು ಕಾಕತಾಳೀಯ ಎಂಬಂತೆ ನಿಜವಾಗಿದ್ದು, ನಮ್ಮ ಮನೆಯ ದೇವರು ಬಳ್ಳಾರಿಯ ಚೌಡೇಶ್ವರಿ, ದುರ್ಗಮ್ಮ ದೇವರೇ ನನ್ನ ಬಾಯಿಂದ ಆ ಮಾತನ್ನು ಹೇಳಿಸಿರಬಹುದು. ಆದರೆ, ಶಾಸಕರು ರಾಜೀನಾಮೆ ನೀಡಿರುವುದಕ್ಕೂ ನಾನು ಹೇಳಿರುವ ಹೇಳಿಕೆಗೂ ಸಂಬಂಧವಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್​.ಈಶ್ವರಪ್ಪ

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಅನ್ಯ ಕಾರ್ಯದ ನಿಮಿತ್ತ ಬಳ್ಳಾರಿಗೆ ಬಂದಾಗ ನೋಡ್ತಾ ಇರಿ, ಶೀಘ್ರದಲ್ಲೇ ಆಪರೇಷನ್ ಕಮಲ ಬಳ್ಳಾರಿಯಿಂದಲೇ ಆರಂಭವಾಗಬಹುದು ಎಂಬ ಮಾತನ್ನು ಹೇಳಿದ್ದೆ. ಆದರೆ, ಅದು ಬಳ್ಳಾರಿಯಿಂದಲೇ ಆರಂಭವಾಗಿ ನನ್ನ ಮಾತು ನಿಜವಾಗಿದೆ. ಆದರೆ, ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ ಎಂದರು.

ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿದರೆ ಮುಂದಿನ ಹಾದಿಯ ಕುರಿತು ಕೇಂದ್ರದ ನಾಯಕರು ನಿರ್ಣಯ ಕೈಗೊಳ್ಳುತ್ತಾರೆ. ನಾವು ರಾಜಕಾರಣ ಮಾಡುತ್ತೇವೆ. ಕೇಂದ್ರದ ನಾಯಕರ ಆದೇಶವನ್ನು ಆಧರಿಸಿ ನಾವು ನಿರ್ಣಯ ಕೈಗೊಳ್ಳುತ್ತೇವೆ. ಶಾಸಕರನ್ನು ಕಾಂಗ್ರೆಸ್‌ನವರು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಶಾಸಕರ ರಾಜೀನಾಮೆಗೆ ಅತೃಪ್ತಿಯೋ ಅಥವಾ ಬಿಜೆಪಿ ಸೆಳೆದಿದೆಯೋ ಎಂಬುದನ್ನು ರಾಜೀನಾಮೆ ನೀಡಿದ ಅತೃಪ್ತ ಶಾಸಕರೇ ಸ್ಪಷ್ಟಪಡಿಸಬೇಕು ಎಂದರು.

ಬಿಜೆಪಿ ಶಾಸಕರೆಲ್ಲರೂ ಬೆಂಗಳೂರಿಗೆ ಆಗಮಿಸಬೇಕೆಂದು ಪಕ್ಷದ ರಾಜ್ಯ ಮುಖಂಡರಿಂದ ಯಾವುದೇ ಬುಲಾವ್ ಬಂದಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಲಾಗಿತ್ತು. ಆಗ ಅಮಿತ್ ಶಾ ಅವರು ಪಕ್ಷವನ್ನು ಸಂಘಟನೆ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ರಾಜ್ಯದ ಹಲವೆಡೆ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಆ ಕಾರ್ಯಕ್ರಮದ ನಿಮಿತ್ತ ಇಂದು ಬಳ್ಳಾರಿಗೆ ಆಗಮಿಸಿದ್ದೇನೆ ಹೊರತು ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿರುವುದು ನನಗೆ ಮಾಧ್ಯಮದಿಂದಷ್ಟೇ ತಿಳಿದು ಬಂದಿದೆ ಎಂದರು.

For All Latest Updates

TAGGED:

ABOUT THE AUTHOR

...view details