ಬಳ್ಳಾರಿ: ಜಿಲ್ಲೆಯ ಕಾನಾಹೊಸಹಳ್ಳಿಯ ಸಮೀಪದ ಹುಲಿಕೆರೆ ಯುವಕರು ಭಾನುವಾರ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬಿದ್ದ ಗುಂಡಿ ಮುಚ್ಚುವ ಮೂಲಕ ವಿಭಿನ್ನವಾಗಿ ಸ್ನೇಹಿತರ ದಿನವನ್ನ ಆಚರಿಸಿಕೊಂಡರು.
ರಸ್ತೆಯಲ್ಲಿನ ಗುಂಡಿ ಮುಚ್ಚಿ ಸ್ನೇಹಿತರ ದಿನ ಆಚರಿಸಿದ ಹುಲಿಕೆರೆ ಯುವಕರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿಯ ಹುಲಿಕೆರೆ ಯುವಕರು ಸ್ನೇಹಿತರ ದಿನದ ನಿಮಿತ್ತ ಹುಲಿಕೆರೆಯ ಭಗತ್ ಸಿಂಗ್ ಯುವಕರ ಸಂಘದ ಸದಸ್ಯರಾದ ರಾಘವೇಂದ್ರ ಬಾಲಾಜಿ, ಆದರ್ಶ ನಾಯಕ, ಮಣಿಕಂಠ, ಏಕಾಂತ ನಾಲ್ಕು ಜನ ಯುವಕರು ಸೇರಿ ಕಾನಾಹೊಸಹಳ್ಳಿ ಹುಲಿಕೆರೆಗೆ ಸಂಪರ್ಕಿಸಿ ದಾವಣಗೆರೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಮಣ್ಣು ಹಾಕಿ ರಸ್ತೆ ಸರಿ ಪಡಿಸಿದರು.
ರಸ್ತೆಯಲ್ಲಿನ ಗುಂಡಿ ಮುಚ್ಚಿ ಸ್ನೇಹಿತರ ದಿನ ಆಚರಿಸಿದ ಹುಲಿಕೆರೆ ಯುವಕರು.. ರಸ್ತೆಯಲ್ಲಿ ಗುಂಡಿ ಬಿದ್ದು ಹಲವು ದಿನಗಳೇ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಮದ್ಯೆ ಬಿದ್ದಿರುವ ಗುಂಡಿಗಳಿಂದ ಪ್ರಯಾಣಿಕರಿಗೆ, ಬೈಕ್ ಸವಾರರಿಗೆ ಓಡಾಡಲು ತುಂಬಾ ತೊಂದರೆಯಾಗಿತ್ತು. ಹಲವು ಬೈಕ್ ಸವಾರರು ಬಿದ್ದಿರುವ ಘಟನೆಯೂ ಜರುಗಿತ್ತು. ಇದನ್ನು ಗಮನಿಸಿದ ಹುಲಿಕೆರೆಯ ಯುವಕರು, ಭಾನುವಾರ ಸ್ನೇಹಿತರ ದಿನವನ್ನ ವಿಶೇಷವಾಗಿ ಆಚರಿಸಬೇಕೆಂದು ನಿರ್ಧರಿಸಿ, ಬೆಳಗ್ಗೆಯಿಂದಲೇ ಸಲಿಕೆ - ಗುದ್ದಲಿ ಹಿಡಿದು ಮಣ್ಣು ಹಾಕಿ ರಸ್ತೆ ಸರಿಪಡಿಸಿ ಸ್ನೇಹಿತರ ದಿನವನ್ನ ವಿಶೇಷಗೊಳಿಸಿದರು.
ಹುಲಿಕೆರೆ ಈ ಯುವಕರ ವಿಶೇಷ ಸ್ನೇಹಿತರ ದಿನಾಚರಣೆ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸಾಕಷ್ಟು ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.