ಕರ್ನಾಟಕ

karnataka

ETV Bharat / state

ರಾಜಸ್ಥಾನ ಹತ್ಯೆ ಪ್ರಕರಣ: ಹೊಸಪೇಟೆ ಬಂದ್‍ - ಪ್ರತಿಭಟನೆ ತಡೆದ ಪೊಲೀಸರು!

ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣಕ್ಕೆ ಖಂಡನೆ - ಹೊಸಪೇಟೆ ಬಂದ್‍ಗೆ ಕರೆ - ಪ್ರತಭಟನೆ ತಡೆದ ಪೊಲೀಸರ ವಿರುದ್ಧ ಕಾರ್ಯಕರ್ತರು ಗರಂ.

Hosapete bandh condemning Rajasthan kanhaiya lal murder case
ಹೊಸಪೇಟೆ ಬಂದ್‍

By

Published : Jul 2, 2022, 11:20 AM IST

Updated : Jul 2, 2022, 12:59 PM IST

ಹೊಸಪೇಟೆ (ವಿಜಯನಗರ):ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣ ಖಂಡಿಸಿ ಇಂದು ವಿವಿಧ ಸಂಘಟನೆಗಳು ಹೊಸಪೇಟೆ ಬಂದ್‍ಗೆ ಕರೆ ನೀಡಿವೆ. ನಗರದ ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು.

ಹೊಸಪೇಟೆ ಬಂದ್‍

ಬಸ್, ಆಟೋ, ವಾಹನ ಸಂಚಾರ ಮತ್ತು ಶಾಲಾ - ಕಾಲೇಜುಗಳು ಎಂದಿನಂತೆ ಆರಂಭವಾಗಿದೆ. ಬಂದ್ ಹಿನ್ನೆಲೆ ಹೊಸಪೇಟೆಯ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಶ್ರೀರಾಮಸೇನೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆ ಪ್ರತಿಭಟನೆ ಆರಂಭಿಸಿದರು.

ಆದರೆ ನಗರದ ಪಾದಗಟ್ಟಿ ಆಂಜನೇಯ ದೇವಸ್ಥಾನ ಮುಂದೆ ಪ್ರತಿಭಟನೆಗಾಗಿ ಸಿದ್ಧಪಡಿಸಿದ್ದ ವೇದಿಕೆ ಮುಂಭಾಗದ ಚೇರ್​ಗಳನ್ನು ಪೊಲೀಸರು ತೆರವುಗೊಳಿಸಲು ಮುಂದಾದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾಕಾರರು-ಪೊಲೀಸರ ನಡುವೆ ವಾಗ್ವಾದ

ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೂ ಮಾತು ಕೇಳದ ಕಾರ್ಯಕರ್ತರಿಗೆ ಪೊಲೀಸರು ಲಾಠಿ ಬೀಸಿದರು. ಈ ವೇಳೆ ಕಾರ್ಯಕರ್ತನೊಬ್ಬನ ಕಾಲರ್ ಹಿಡಿದು ಎಳೆದ ಎಸ್ಪಿ, ಪರವಾನಗಿ ಪಡೆಯದೇ ಪ್ರತಿಭಟನೆ ಆಯೋಜನೆ ಮಾಡುವುದು ತಪ್ಪು. ಪ್ರತಿಭಟನೆಗೆ ನಾವು ಒಪ್ಪಿಗೆ ನೀಡಿಲ್ಲ ಎಂದು ಎಸ್ಪಿ ಡಾ. ಅರುಣ್ ಕೆ ತಿಳಿಸಿದರು.

ಇದನ್ನೂ ಓದಿ:ಬೆಳಗಾವಿ: ಮಲಗಿರುವ ರೀತಿಯಲ್ಲಿ ವ್ಯಕ್ತಿಯ ಅಸ್ತಿಪಂಜರ ಪತ್ತೆ!

ಹೊಸಪೇಟೆ ಅಲ್ಲದೇ ರಾಜ್ಯದ ವಿವಿಧೆಡೆ ಈ ಕೊಲೆ ಪ್ರಕರಣ ಖಂಡಿಸಿ ಪ್ರತಿಭನೆಗಳು ನಡೆಯುತ್ತಿವೆ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ.

Last Updated : Jul 2, 2022, 12:59 PM IST

ABOUT THE AUTHOR

...view details