ಕರ್ನಾಟಕ

karnataka

ETV Bharat / state

ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಗಲಾಟೆ: ಮತ್ತೊಂದು ವಿಡಿಯೋ ರಿಲೀಸ್​​ - Hagaribommanahalli Municipality

ನಿನ್ನೆ ಬಿಜೆಪಿಯ ಮುಖಂಡರೊಬ್ಬರು ಶಾಸಕರನ್ನು ಕೆರಳಿಸುವ ಮಾತು ವಿಡಿಯೋ ರಿಲೀಸ್ ಆಗಿತ್ತು. ಇಂದು ಶಾಸಕರೇ ಜಗಳಕ್ಕಿಳಿದಿದ್ದಾರೆ ಎನ್ನಲಾದ ದೃಶ್ಯಾವಳಿಯೊಂದು ವೈರಲ್​ ಆಗಿದೆ.

Hagaribommanahalli Municipal Council President - Vice-Presidential Election Riot video
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಗಲಾಟೆ; ವೀಡಿಯೋ

By

Published : Nov 10, 2020, 9:01 AM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿಗರ ಗಲಾಟೆಯ ವಿಡಿಯೋಗಳು ಎಪಿಸೋಡ್​​ಗಳಂತೆ ರಿಲೀಸ್ ಆಗುತ್ತಿವೆ.

ಹಗರಿಬೊಮ್ಮನಹಳ್ಳಿಯ ಹಾಲಿ ಶಾಸಕ ಭೀಮಾ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಏಕಾಏಕಿ ಪುರಸಭೆ ಕಾರ್ಯಾಲಯಕ್ಕೆ ಕಾರಿನಲ್ಲಿ ಬಂದಿಳಿದಿದ್ದರು. ಇದರಿಂದ ಕುಪಿತಗೊಂಡ ಬಿಜೆಪಿಯ ಕಾರ್ಯಕರ್ತರು ಶಾಸಕ ಭೀಮಾ ನಾಯ್ಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದರು ಎನ್ನಲಾಗ್ತಿದೆ.

ಚುನಾವಣೆ ಗಲಾಟೆ ವಿಡಿಯೋ

4.30 ಸೆಕೆಂಡ್ ಇರುವ ಈ ವಿಡಿಯೋ ತುಣುಕಿನಲ್ಲಿ ಪುರಸಭೆ ಕಾರ್ಯಾಲಯದೊಳಗೆ ಕಾರಿನಲ್ಲಿ ಬಂದು ಎಂಟ್ರಿಕೊಟ್ಟ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಅವರು, ಕಾರಿಂದ ಇಳಿದು ನೇರವಾಗಿ ಎದುರಾಳಿಗಳಾದ ಬಿಜೆಪಿ ಕಾರ್ಯಕರ್ತರತ್ತ ತೆರಳಿ ಮಾತಿಗಿಳಿದಿದ್ದನ್ನು ಕಾಣಬಹುದು. ಸ್ವತಃ ಶಾಸಕರೇ ಜಗಳಕ್ಕಿಳಿಯುತ್ತಾರೆ. ಆಗ ಎರಡು ಕಡೆಗಳ ಕಾರ್ಯಕರ್ತರ ಜಮಾವಣೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರನ್ನು ತಡೆದಿರುವ ದೃಶ್ಯಗಳನ್ನು ಕಾಣಬಹುದು.

ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನೂಕಾಟ

ಒಟ್ಟಿನಲ್ಲಿ ಈ ಗಲಾಟೆ ಸೀರಿಯಲ್​​ಗಳ ಎಪಿಸೋಡ್​​ನಂತೆ ದಿನಕ್ಕೊಂದು ವಿಡಿಯೋಗಳು ರಿಲೀಸ್ ಆಗುತ್ತಲೇ ಇವೆ.‌ ನಿನ್ನೆ ಬಿಜೆಪಿಯ ಮುಖಂಡರೊಬ್ಬರು ಶಾಸಕರನ್ನು ಕೆರಳಿಸುವ ಮಾತು ಆಡಿಯೋ - ವಿಡಿಯೋ ರಿಲೀಸ್ ಆಗಿತ್ತು. ಇಂದು ಶಾಸಕರೇ ಜಗಳಕ್ಕಿಳಿದಿದ್ದರು ಎನ್ನಲಾದ ದೃಶ್ಯಾವಳಿಯೊಂದು ಬಿಡುಗಡೆ ಆಗಿದೆ.

ABOUT THE AUTHOR

...view details