ಬಳ್ಳಾರಿ:ಗಣಿನಾಡಿನ ಶಕ್ತಿ ಆದಿದೇವತೆ ಕನಕದುರ್ಗಮ್ಮ ದೇವಾಲಯದಲ್ಲಿ ಇಂದು ಬೆಳಗ್ಗೆಯಿಂದಲೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಧಾವಿಸುತ್ತಿದ್ದಾರೆ.
ನಗರದ ಕನಕದುರ್ಗಮ್ಮ ದೇವಾಲಯದಲ್ಲಿ ಯುಗಾದಿ ಹಬ್ಬದ ನಿಮ್ಮಿತ್ತ ದುರ್ಗಾ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು, ಇಂದು ಬೆಳಗ್ಗೆಯಿಂದಲೇ 60 ಬಗೆಯ ಚಿನ್ನಾಭರಣದಿಂದ ಅಲಂಕಾರ ಮಾಡಲಾಗುತ್ತಿದ್ದು, ಸುಮಾರು 6 ರಿಂದ 7 ಕೆ.ಜಿಯಷ್ಟು ತೂಕವಿರುವ ಚಿನ್ನವನ್ನ ಘಳಿಗೆ ಒಂದರಂತೆ ದೇವಿಗೆ ಹಾಕಿ ಅಲಂಕಾರ ಮಾಡಲಾಗಿದೆ.
ವಿಕಾರ ಸಂವತ್ಸರ ಯುಗಾದಿಯ ವರ್ಷದ ಮೊದಲ ದಿನದಂದು ಪುರಾಣ ಪ್ರಸಿದ್ಧ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಕನಕದುರ್ಗಮ್ಮ ದೇವಾಲಯದಲ್ಲಿ ಯುಗಾದಿ ಸಂಭ್ರಮ ಹಬ್ಬದ ಸಂದರ್ಭ ದೇವಿಗೆ ವಿಶೇಷವಾಗಿ ಚಿನ್ನಾಭರಣ ಅಲಂಕಾರ ಮಾಡುವ ಸಲುವಾಗಿ ಎಪ್ಪತ್ತು ವಿವಿಧ ಚಿನ್ನಾಭರಣಗಳಿವೆ. ಆಯಾ ಸಂದರ್ಭಾನುಸಾರ ಚಿನ್ನಾಭರಣವನ್ನ ಅಲಂಕಾರ ಮಾಡಲಾಗಿದೆ. ಪ್ರತಿ ಸಾರಿ ಅಲಂಕಾರ ಮಾಡಿದಾಗ್ಲೂ ಕೂಡ ವಿಶೇಷತೆ ಇರುತ್ತದೆ.
ದೇವಿಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಸಾವಿರಾರು ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಿಕಾರಿ ನಾಮ ಸಂವತ್ಸರಕ್ಕೆ ಪಾದಾರ್ಪಣೆ ಮಾಡುವ ನಿಟ್ಟಿನಲ್ಲಿ ಈ ದಿನ ಸಂಜೆ ಪಂಚಾಂಗ ಶ್ರವಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕನಕದುರ್ಗಮ್ಮ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ