ಕರ್ನಾಟಕ

karnataka

ETV Bharat / state

ಕೋರ್ಟ್​ ವೆಚ್ಚ ನಿಭಾಯಿಸಲು ಬೈಕ್​ ಕಳ್ಳತನಕ್ಕೆ ಇಳಿದ ಅತ್ಯಾಚಾರ, ಕೊಲೆ ಆರೋಪಿಗಳ ಬಂಧನ - ಕೋರ್ಟ್​ ವೆಚ್ಚ ನಿಭಾಯಿಸಲು ಬೈಕ್​ ಕಳ್ಳತನ

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಹೊತ್ತಿದ್ದ ಆರೋಪಿಗಳು ಕೋರ್ಟ್​ನಲ್ಲಿ ಇದರ ವೆಚ್ಚ ನಿಭಾಯಿಸಲು ಬೈಕ್​ ಕಳ್ಳತನ ಮಾಡುತ್ತಿದ್ದರು. ಇವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Four arrest
Four arrest

By

Published : Sep 4, 2021, 5:39 AM IST

ಹೊಸಪೇಟೆ(ವಿಜಯನಗರ): ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, 25 ಬೈಕ್​​​ಗಳನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ಸಂಜೆ ಜಪ್ತಿ ಮಾಡಿಕೊಂಡಿದ್ದಾರೆ. ನಾಲ್ವರು ಕಳ್ಳರು ಹೊಸಪೇಟೆ ಹಾಗೂ ಸಿರುಗುಪ್ಪ ಮೂಲದವರು ಎಂದು ತಿಳಿದು ಬಂದಿದೆ.

ಬೈಕ್​ ಕಳ್ಳತನಕ್ಕೆ ಇಳಿದ ಅತ್ಯಾಚಾರ, ಕೊಲೆ ಆರೋಪಿಗಳ ಬಂಧನ

ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕಮಲಾಪುರ, ಕೊಪ್ಪಳ ಹಾಗೂ ಗಂಗಾವತಿ ನಗರದಲ್ಲಿ ಲಾಕ್​ ಮಾಡಿ ನಿಲ್ಲಿಸಿದ್ದ ಬೈಕ್​ಗಳನ್ನ ನಕಲಿ ಕೀ ಬಳಕೆ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳ್ಳತನ ಮಾಡಿದ್ದ ಬೈಕ್​​ಗಳನ್ನು ದರೂರು, ಕರೂರು, ಆಂಧ್ರಪ್ರದೇಶದ ಹೊಳಗುಂದಾ ಭಾಗದಲ್ಲಿ ಕಡಿಮೆ ದರದಲ್ಲಿ ಮಾರಟ ಮಾಡುತ್ತಿದ್ದರಂತೆ. ಪಟ್ಟಣ ಠಾಣೆಯ PSI ಎಂ.ಶ್ರೀನಿವಾಸ್​​ ಹಾಗೂ ಸಿಬ್ಬಂದಿ ವಾಹನ ಕಳ್ಳರ ಶೋಧ ನಡೆಸುತ್ತಿದ್ದಾಗ ಇವರು ಸಿಕ್ಕಿಬಿದ್ದಿದ್ದಾರೆ. ಆಗಸ್ಟ್​​ 29 ರಂದು ಮೊದಲ‌ ಸಿಕ್ಕ ಆರೋಪಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಉಳಿದವರನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದಾರೆ.

ಇದನ್ನೂ ಓದಿರಿ: ಧಾರವಾಡ: ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ನಟಿ ತಾರಾ ಭೇಟಿ, ವಿಶೇಷ ಪೂಜೆ

ಬಂಧಿತ ಆರೋಪಿಗಳ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಇವೆ. ಕೋರ್ಟ್​​ ಖರ್ಚು ನಿಭಾಯಿಸಲು ಕಳ್ಳತನಕ್ಕೆ ಇಳಿದಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ABOUT THE AUTHOR

...view details